ರಾಯಚೂರು: ಜಿಲ್ಲಾ ಪೊಲೀಸರು ವಿಮೆ ಮಾಡಿಸದೆ ಓಡಿಸುತ್ತಿರುವ ಬೈಕ್ ಹಾಗೂ ಇತರ ವಾಹನಗಳನ್ನು ಹಿಡಿದು ವಿಮೆ ಮಾಡಿಸುತ್ತಿದ್ದಾರೆ. ವಿಮೆ ಇಲ್ಲದ್ದಕ್ಕೆ ಬೈಕ್ ಹಿಡಿದು ಪೊಲೀಸ್ ಠಾಣೆಗೆ ತಂದು ವಿಮೆ ಮಾಡಿದ್ದಕ್ಕೆ ಸವಾರನೊಬ್ಬ ಪೊಲೀಸರ ಮುಂದೆಯೇ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
Advertisement
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಪೊಲೀಸರು ವಾಹನಗಳ ವಿಮೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈವರೆಗೆ 400ಕ್ಕೂ ಹೆಚ್ಚು ಬೈಕ್‍ಗಳನ್ನು ಜಪ್ತಿ ಮಾಡಿರುವ ಪೊಲೀಸರು ಎಲ್ಲಾ ಬೈಕ್‌ಗಳಿಗೂ ವಿಮೆ ಮಾಡಿಸಿದ್ದಾರೆ. ನಗರದ ಎಸ್‍ಪಿ ಕಚೇರಿ ಆವರಣದಲ್ಲಿ ಜಪ್ತಿಯಾದ ಎಲ್ಲಾ ಬೈಕ್‍ಗಳನ್ನು ನಿಲ್ಲಿಸಿ ವಿಮೆ ಮಾಡಿಸಲಾಗುತ್ತಿದೆ. ಪೊಲೀಸರು ವಾಹನಗಳಿಗೆ ವಿಮೆ ಮಾಡಿಸಿ ವಾಹನ ಸವಾರರಿಗೆ ಹಿಂದಿರುಗಿಸುತ್ತಿದ್ದಾರೆ. ಇದನ್ನೂ ಓದಿ: ವಿದ್ಯುತ್ ಶಾಕ್ ತಗುಲಿ ಆಸ್ಪತ್ರೆ ಸೇರಿದ್ದ ರಾಷ್ಟ್ರೀಯ ಫುಟ್ಬಾಲ್ ಆಟಗಾರ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೇ ನಿಧನ
Advertisement
Advertisement
ಕಳೆದ ಒಂದು ವಾರದಿಂದ ದಂಡ ಹಾಕದೆ ವಾಹನಗಳನ್ನು ಹಿಡಿದು ವಿಮೆ ಮಾಡಿಸಲಾಗಿತ್ತು. ಇನ್ನುಮುಂದೆ ವಾಹನಗಳಿಗೆ ದಂಡ ವಿಧಿಸಿ ವಿಮೆ ಮಾಡಿಸಲಾಗುವುದು. ಹೀಗಾಗಿ ಎಲ್ಲಾ ವಾಹನಗಳ ಮಾಲೀಕರು ತಮ್ಮ ಒಳಿತಿಗಾಗಿ ವಿಮೆ ಮಾಡಿಸಿಕೊಳ್ಳುವಂತೆ ರಾಯಚೂರು ಎಸ್.ಪಿ ನಿಖಿಲ್ ಬಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಬುಲ್ಡೋಜ್ ಮಾಡಲು ಬಿಜೆಪಿಯಿಂದ ಯೋಗಿ ಅಸ್ತ್ರ!