ಕಲಬುರಗಿ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸಂಚಾರಿ ಠಾಣೆಯ ಎಎಸ್‍ಐ ಅವರ ಪುತ್ರ ಸಾವಿಗೀಡಾದ ಘಟನೆ ನಿನ್ನೆ ತಡ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಕಲಬುರಗಿಯ ಕುಸನೂರ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದ ಈ ಘಟನೆಯಲ್ಲಿ ಸಂಚಾರಿ ಠಾಣೆಯ ಎಎಸ್‍ಐ ಶ್ರೀಮಂತ್ ಅವರ ಮಗ ಸುನೀಲ್(28) ಸಾವನ್ನಪ್ಪಿದ್ದಾನೆ. ನಗರದಿಂದ ಕುಸನೂರ ರಸ್ತೆಯಲ್ಲಿರುವ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೋಟ್ ಪಲ್ಟಿ – ಸಮುದ್ರ ಪಾಲಾಗುತ್ತಿದ್ದ ಆರು ಜನರ ರಕ್ಷಣೆ
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬೈಕ್ ಅಪಘಾತದಲ್ಲಿ ಹೆಚ್ಚಿನ ಯುವಕರು ಸಾವನಪ್ಪುತ್ತಿದ್ದು, ಬಹುತೇಕ ಯುವಕರ ವಾಹನ ವೇಗವಾಗಿ ಚಾಲನೆ ಮಾಡಿ ಅಪಘಾತವಾಗಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ ಯುವಕರಲ್ಲಿ ವಾಹನಗಳನ್ನು ಚಲಾಯಿಸುವಾಗ ಕೈಗೊಳ್ಳಬೇಕಾದ ಮುಂಜಾಗೃತೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಇದನ್ನೂ ಓದಿ: ಜ್ಯೂಸ್ ಎಂದು ಆಲ್ಕೊಹಾಲ್ ಸೇವಿಸಿ 5ರ ಬಾಲಕ ದುರ್ಮರಣ