ಲಕ್ನೋ: ವಧುವಿನ ಕಡೆಯವರು ಬೈಕ್ (Bike) ಕೊಡಿಸಿಲ್ಲ ಎಂದು ವರನೊಬ್ಬ ಮದುವೆ (Wedding) ಮಂಟಪದಿಂದ ಓಡಿ ಹೋದ ಘಟನೆ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.
ಉತ್ತರಪ್ರದೇಶದ ಬಾರಾಬಂಕಿಯ ವಧುವಿಗೆ ಅಯೋಧ್ಯೆಯ ಮಾವಿಯ ವರನ ಜೊತೆ ವಿವಾಹ ಏರ್ಪಟ್ಟಿತ್ತು. ಈ ವೇಳೆ ವರದಕ್ಷಿಣೆಯಾಗಿ (Dowry) ಬೈಕ್‍ನ್ನು ಕೇಳಿದ್ದರು. ಆದರೆ ವಧುವಿನ ಕಡೆಯವರಿಗೆ ಬೈಕ್‍ನ್ನು ನೀಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲೇ ಮದುವೆ ಮಂಟಪದಲ್ಲೇ ವರನ ಕಡೆಯವರಿಗೂ ವಧುವಿನ ಕಡೆಯವರಿಗೂ ವಾಗ್ವಾದ ನಡೆದಿದೆ.
Advertisement
Advertisement
ಈ ವೇಳೆ ವಧುವಿನ ತಂದೆ ಬೈಕ್ ಕೊಡಿಸುವಷ್ಟು ಹಣವಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವರನ ತಂದೆ ಶ್ಯಾಮ್ ಲಾಲ್ ವರದಕ್ಷಿಣೆಯನ್ನು ಸರಿಯಾಗಿ ನೀಡಿಲ್ಲ ಎಂದು ಮದುವೆಯನ್ನು ರದ್ದುಗೊಳಿಸಿ ವರನೊಂದಿಗೆ ಮದುವೆ ಮಂಟಪದಿಂದ ಹೊರಟು ಹೋಗಿದ್ದಾರೆ. ಇದನ್ನೂ ಓದಿ: ಕರ್ನಾಟಕ ಪಾಲಿಟಿಕ್ಸ್ ಜಿದ್ದಾ ಜಿದ್ದಿ – ಬಿಜೆಪಿಗೆ ವಲಸೆ ಹೋಗಲು ಕಾಯ್ತಿವೆ ಹಕ್ಕಿಗಳು?
Advertisement
ಘಟನೆಗೆ ಸಂಬಂಧಿಸಿ ವಧುವಿನ ಮನೆಯವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಅಷ್ಟೇ ಅಲ್ಲದೇ ವಧು ಮದುವೆ ನಡೆಯದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ಈ ವೇಳೆ ಪೊಲೀಸರು ವರ ಶೀಘ್ರದಲ್ಲೇ ಬರುತ್ತಾನೆ. ಮದುವೆ ನಡೆಯುತ್ತದೆ ಎಂದು ವಧುವಿನ ಮನೆಯವರನ್ನು ಮನೆಗೆ ಕಳುಹಿಸಲು ಪ್ರಯತ್ನಿಸಿದ್ದಾರೆ.
Advertisement
ಇದಕ್ಕೆ ಒಪ್ಪದ ವಧು ತನ್ನ ತಂದೆ- ತಾಯಿ ಬಡವರು. ಶಾಸ್ತ್ರೋಕ್ತ ವಿವಾಹಕ್ಕೆ ಚಿನ್ನ ಉಂಗುರು ಹಾಗೂ 5,000 ಅಗತ್ಯವಿತ್ತು. ಅದನ್ನು ಕೊಟ್ಟಿದ್ದೆವು. ಆದರೂ ವರದಕ್ಷಿಣೆ ಕೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಆಕೆ ತನಗೆ ಮದುವೆ ಮಾಡಿಸುವಂತೆ ಪೊಲೀಸರ ಬಳಿ ವಿನಂತಿಸಿದ್ದಾಳೆ. ಅಷ್ಟೇ ಅಲ್ಲದೇ ಮದುವೆಯಾಗದಿದ್ದರೆ ನಾನು ನನ್ನ ಜೀವವನ್ನೇ ತೆಗೆದುಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾಗಿ ತಿಳಿಸಿದರು. ಇದನ್ನೂ ಓದಿ: ಸಿನಿಮಾ ರೀತಿಯಲ್ಲೇ ಮನೆಗೆ ನುಗ್ಗಿದ 50 ಗೂಂಡಾಗಳು- ವೈದ್ಯೆ ಕಿಡ್ನ್ಯಾಪ್