ಬೈಕ್ ನಿಲ್ಲಿಸಲು ಮೆಟ್ರೋ ಪಾರ್ಕಿಂಗ್‌ ಬಳಸುತ್ತಿದ್ದರೆ ಹುಷಾರಾಗಿರಿ!

Public TV
1 Min Read
Bike goes missing from Seetharampalya Metro Station metro parking Bengaluru

– ಮೆಟ್ರೋ ಪಾರ್ಕಿಂಗ್‌ ಜಾಗದಿಂದಲೇ ಬೈಕ್‌ ನಾಪತ್ತೆ
– ಸಿಸಿಟಿವಿ ಇದ್ದರೂ ತನಿಖೆ ನಡೆಸದ ಪೊಲೀಸರು

ಬೆಂಗಳೂರು: ನೀವು ಬೈಕ್ ನಿಲ್ಲಿಸಲು ಮೆಟ್ರೋ ಪಾರ್ಕಿಂಗ್‌ (Metro Parking) ಬಳಸುತ್ತೀರಾ? ಹಾಗಾದ್ರೆ ಹುಷಾರಾಗಿರಿ. ವ್ಯಕ್ತಿಯೊಬ್ಬರ ಬೈಕ್‌ (Bike) ಮೆಟ್ರೋ ಪಾರ್ಕಿಂಗ್‌ ಜಾಗದಿಂದಲೇ ನಾಪತ್ತೆಯಾಗಿದೆ.

ಹೌದು, ಡಿಸೆಂಬರ್ 13ರಂದು ಯಶಸ್ ಎಂಬವರು ವೈಟ್‌ ಫೀಲ್ಡ್‌ ಸಮೀಪದ ಸೀತಾರಾಮಪಾಳ್ಯ ಮೆಟ್ರೋ ನಿಲ್ದಾಣದಲ್ಲಿ (Seetharampalya Metro Station) ರಾಯಲ್ ಎನ್‌ಫೀಲ್ಡ್‌ ಬೈಕ್ ನಿಲ್ಲಿಸಿ ಹಾಸನಕ್ಕೆ ತೆರಳಿದ್ದರು.

210 ರೂ. ನೀಡಿ ಮೂರು ದಿನದ ಟೋಕನ್ ಕೂಡ ಪಡೆದುಕೊಂಡಿದ್ದರು. ಆದರೆ ಮರುದಿನ ಡಿ. 14 ರಂದು ಸಂಜೆ 7:30ಕ್ಕೆ ಬೈಕ್ ಇಲ್ಲ ಎಂದು ಕರೆ ಮಾಡಿದ್ದಾರೆ. ಡಿ.15 ರಂದು ಯಶಸ್‌ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಬೈಕ್ ಎಲ್ಲಿ ಎಂದು ಕೇಳಿದರೆ ನಮಗೆ ಗೊತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಬಿಎಂಆರ್‌ಸಿಎಲ್‌ನವರಿಗೆ (BMRCL) ಕೇಳಿದರೆ ನಮಗೂ ಪಾರ್ಕಿಂಗ್‌ಗೆ ಸಂಬಂಧವಿಲ್ಲ ಎಂಬ ಉತ್ತರ ಬಂದಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ದೇವಸ್ಥಾನಗಳಲ್ಲಿ ಏಕಾದಶಿ ಸಂಭ್ರಮ – ರಾತ್ರಿ 11 ಗಂಟೆ ವರೆಗೆ ಇಸ್ಕಾನ್‌ನಲ್ಲಿ ದರ್ಶನಕ್ಕೆ ಅವಕಾಶ

 

ಪಾರ್ಕಿಂಗ್‌ ನೋಡಿಕೊಳ್ಳುವ ಸುರೇಖಾ ಎಂಟರ್ ಪ್ರೈಸಸ್ ಕಂಪನಿ ಮೇಲೆ ಯಶಸ್‌ ತಂದೆ ಸೋಮಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಸಿಸಿಟಿವಿ ಇದ್ದರೂ ಪೊಲೀಸರು ಈ ಪ್ರಕರಣವನ್ನು ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸೋಮಣ್ಣ ಸಿಟ್ಟು ಹೊರಹಾಕಿದ್ದಾರೆ.

ಯಶಸ್ ಇಲ್ಲಿ ಮೊದಲ ಬಾರಿ ಪಾರ್ಕ್‌ ಮಾಡಿಲ್ಲ. ಹಲವು ಬಾರಿ ಬೈಕ್ ಪಾರ್ಕ್ ಮಾಡಿ ಮೆಟ್ರೋ ಹತ್ತಿದ್ದಾರೆ. ಆದರೆ ಪಾರ್ಕ್‌ ಮಾಡಿದ ಜಾಗದಿಂದಲೇ ಬೈಕ್‌ ನಾಪತ್ತೆಯಾಗಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ. ಇದನ್ನೂ ಓದಿ: ಕಾಡಿನ ರಹಸ್ಯ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿದ್ದಾರೆ ನಕ್ಸಲರು!

ಇತ್ತೀಚಿನ  ದಿನಗಳಲ್ಲಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಿರುವಾಗ ಸಿಸಿಟಿವಿ ಇದ್ದರೂ ಪೊಲೀಸರು ಇನ್ನೂ ಯಾಕೆ ತನಿಖೆ ನಡೆಸಿಲ್ಲ ಎನ್ನುವುದೇ ದೊಡ್ಡ ಪ್ರಶ್ನೆ.

 

Share This Article