ವಿಜಯಪುರ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ನಗರದ ಹೊರವಲಯದ ಇಂಡಿ ಬೈಪಾಸ್ (Indi Bypass) ಬಳಿ ನಡೆದಿದೆ.ಇದನ್ನೂ ಓದಿ: ಮಾರ್ಚ್ ಅಂತ್ಯಕ್ಕೆ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್?
Advertisement
ಮೃತ ಬೈಕ್ ಸವಾರನನ್ನು ಜಿಲ್ಲೆಯ ಗಡಗಿ ಲೇಔಟ್ ನಿವಾಸಿ ಮಾಳು ಗುಂಡಣ್ಣನವರ (38) ಎಂದು ಗುರುತಿಸಲಾಗಿದೆ.
Advertisement
ಗುಂಡಣ್ಣನವರ ಖಾಸಗಿ ಶಾಲೆಯೊಂದರಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಗರದ ಹೊರವಲಯದ ಸೊಲಾಪುರ ಬೈಪಾಸ್‌ನಿಂದ ಬರುವಾಗ ಇಂಡಿ ಬೈಪಾಸ್ ಬಳಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ವಿಜಯಪುರ ನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ನಾವು ಎಂದಿಗೂ ಅಂಬೇಡ್ಕರ್‌ರನ್ನ ಅವಮಾನಿಸುವುದಿಲ್ಲ.. ನನ್ನ ಹೇಳಿಕೆ ತಿರುಚಲಾಗಿದೆ: ಅಮಿತ್ ಶಾ