ಹಾವೇರಿ: ಎತ್ತಿನಬಂಡಿಗೆ (Bullock Cart) ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರು (Ranebennur) ತಾಲೂಕಿನ ಗುಡಗೂರು ಕ್ರಾಸ್ ಬಳಿ ನಡೆದಿದೆ.
ಶಶಿಕುಮಾರ್ ಉಪ್ಪಾರ (25), ಆಕಾಶ್ ಬಿರಾದಾರ (23) ಮತ್ತು ದರ್ಶನ್ (23) ಮೃತ ದುರ್ದೈವಿಗಳು. ಈ ಮೂವರು ಹನುಮನಮಟ್ಟಿಯಿಂದ ಮೈಲಾರ ಜಾತ್ರೆಗೆ ಬೈಕ್‌ನಲ್ಲಿ ಹೊರಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ವಿದೇಶಗಳಿಗೆ ಅಮೆರಿಕ ನೀಡುತ್ತಿದ್ದ ನೆರವಿಗೂ ಕೊಕ್ಕೆ ಹಾಕಿದ ಟ್ರಂಪ್ – ಭಾರತದ ಮೇಲೂ ಎಫೆಕ್ಟ್?
ದರ್ಶನ್ ಹಾಗೂ ಆಕಾಶ್ ಮೂರನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದರು. ಶಶಿಕುಮಾರ್ ಹನುಮನಮಟ್ಟಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ತಡರಾತ್ರಿ ಎತ್ತಿನಬಂಡಿಗೆ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಈವರೆಗೆ 43 ಕೋಟಿ ಜನರಿಂದ ಪುಣ್ಯಸ್ನಾನ