ಟಿಪ್ಪರ್ ಡಿಕ್ಕಿ – ಬೈಕಲ್ಲಿ ಹೋಗ್ತಿದ್ದ ತಾಯಿ, ಮಗು ಸಾವು

Public TV
1 Min Read
BENGALURU ACCIDENT

ಬೆಂಗಳೂರು: ನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದುಹೋಗಿದೆ. ಮಾರತ್ ಹಳ್ಳಿಯ ರಿಂಗ್‍ರೋಡ್‍ನಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಬೈಕಲ್ಲಿ ಹೋಗ್ತಿದ್ದ ತಾಯಿ ಮತ್ತು 1 ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.

accident web1

ಬೈಕ್‍ನಲ್ಲಿ ಕೆಆರ್ ಪುರಂನ ಶಿವಕುಮಾರ್ ಕುಟುಂಬ ಸಮೇತರಾಗಿ ಸಂಚರಿಸುತ್ತಿದ್ದರು ಮಾರತ್ ಹಳ್ಳಿಯ ರಿಂಗ್‍ರೋಡ್ ಬಳಿ ಬರುತ್ತಿದ್ದಂತೆ ಟಿಪ್ಪರ್ ಒಂದು ಬಂದು ಶಿವಕುಮಾರ್ ಬೈಕ್‍ಗೆ ಗುದ್ದಿದೆ. ಪರಿಣಾಮ ಸಂಚರಿಸುತ್ತಿದ್ದ ಬೈಕ್‍ನಿಂದ ಎಡಕ್ಕೆ ಬಿದ್ದ ಬೈಕ್ ಸವಾರ ಶಿವಕುಮಾರ್ ಪ್ರಾಣಾಪಾಯದಿಂದ ಬಚಾವ್ ಆದರೆ, ಬಲಕ್ಕೆ ಬಿದ್ದ ತಾಯಿ ಮತ್ತು ಮಗುವಿನ ಮೇಲೆ ಟಿಪ್ಪರ್ ಹರಿದು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಬ್ಯಾಂಕ್ ನಲ್ಲಿ ಕಲೆಕ್ಷನ್ ಕೆಲಸ ಮಾಡಿಕೊಂಡು ಶಿವಕುಮಾರ್ ಜೀವನದ ಬಂಡಿ ಸಾಗಿಸುತ್ತಿದ್ದರು. ಇವತ್ತು ತಮಿಳುನಾಡಿನ ಧರ್ಮಪುರಿಯಲ್ಲಿ ಶಿವಕುಮಾರ್ ತಮ್ಮನ ನಿಶ್ಚಿತಾರ್ಥವಿತ್ತು. ಹೀಗಾಗಿ ಬೆಳಗ್ಗೆನೇ ಗಂಡ ಹೆಂಡ್ತಿ ಇಬ್ಬರೂ ಮಗುವನ್ನು ಕರೆದುಕೊಂಡು ಎನ್ ಫೀಲ್ಡ್ ಬೈಕ್ ಏರಿ ಲಗೇಜ್ ಸಮೇತ ಹೊರಟಿದ್ರು. ಆದ್ರೆ ವಿಧಿಯಾಟ ಮಾರತ್ ಹಳ್ಳಿಯ ಮಲ್ಟಿಪ್ಲೆಕ್ಸ್ ರಿಂಗ್ ರೋಡಲ್ಲಿ ಹೋಗ್ತಿದ್ದಾಗ ಹಿಂಬದಿಯಿಂದ ಯಮಧೂತನಂತೆ ಬಂದ ಟಿಪ್ಪರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ತಾಯಿ ಮತ್ತು ಮಗು ಇಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸ್ನೇಹಿತ ಬಿಎಂಟಿಸಿ ಬಸ್ ಡ್ರೈವರ್​​​ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಅರ್ಪಿಸಿದ ರಜನಿಕಾಂತ್

21 ವರ್ಷದ ಶ್ರೀದೇವಿ ಮತ್ತು ಅವರ ಒಂದು ವರ್ಷದ ಮಗು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೆ, ವಿಪರ್ಯಾಸ ಎಂಬಂತೆ ಸ್ಥಳೀಯರು ಯಾರು ನೆರವಿಗೆ ಬಂದಿಲ್ಲ. ಕೊನೆಗೆ ಯಾರೋ ಸಹಾಯ ಮಾಡುವ ನೆಪದಲ್ಲಿ ಮೃತರ ಬಳಿಯಿದ್ದ ಮೊಬೈಲ್ ದೋಚಿದ್ದಾರೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು, ಮೂರು ದಿನಗಳ ಹಿಂದಷ್ಟೇ ಒಂದು ವರ್ಷದ ಮಗುವಿನ ಹುಟ್ಟುಹಬ್ಬ ಆಚರಿಸಲಾಗಿತ್ತು. ಸದ್ಯ ಎಚ್.ಎ.ಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಪತಿಗಾಗಿ ವ್ರತ ಮಾಡಿದ ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ ಮಿಸ್ಸಿಂಗ್

Share This Article
Leave a Comment

Leave a Reply

Your email address will not be published. Required fields are marked *