ಆನೇಕಲ್: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ (Two Bike Head-on collision) ವ್ಯಕ್ತಿ ಒಬ್ಬ ಸ್ಥಳದಲ್ಲಿ ಸಾವನ್ನಪ್ಪಿರುವಂತಹ ಘಟನೆ ಶನಿವಾರ ತಡರಾತ್ರಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಜಿಗಣಿ ಲಿಂಕ್ ರಸ್ತೆಯಲ್ಲಿ ನಡೆದಿದೆ.
ಭದ್ರಾವತಿ ಮೂಲದ ಶಶಾಂಕ್ (20) ಮೃತ ಬೈಕ್ ಸವಾರನಾಗಿದ್ದು ರಿನಿತ್ (22) ಎಂಬ ವ್ಯಕ್ತಿಗೆ ಕಾಲು ಕಟ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಂಗಳೂರಿನ ಹೊಂಗಸಂದ್ರ ನಿವಾಸಿಯಾಗಿರುವ ರಿನಿತ್ ನಿನ್ನೆ ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದಾಗ ಎಂಟಿಆರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಶಾಂಕ್ ಬೈಕ್ ನಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದಾರೆ. ಇದರಿಂದ ಶಶಾಂಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು ರಿನಿತ್‌ಗೆ ಕಾಲು ಕಟ್ ಆಗಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಇನ್ನೆರಡು ದಿನ ಬಾಕಿ – ಬೆಂಗಳೂರಲ್ಲಿ ಸಿದ್ಧತೆ ಹೇಗಿದೆ?
ಸದ್ಯ ರಿನೀತ್ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕ್ರೀಡೆಗೆ ರಾಜಕಾರಣಿಗಳು ಅಪಾಯಕಾರಿ, ಕ್ರಿಕೆಟ್ ಆಟವನ್ನ ರಾಜಕಾರಣಿಗಳಿಂದ ದೂರವಿಡಿ – ಡಿಕೆಶಿ