ವಿಜಯಪುರ: ಹಾಡಹಗಲೇ ನಡು ರಸ್ತೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ವಿಜಯಪುರದ ಜಿಲ್ಲೆಯ ಇಂಡಿ ಪಟ್ಟಣದ ಕಂದಾಯ ನಿರೀಕ್ಷಕರ ಕಚೇರಿ ಎದುರು ನಡೆದಿದೆ.
ಖಾಜಿಸಾಬ್ ಬಾಗವಾನ್ (30) ಕೃತ್ಯ ಎಸಗಿದ ಪತಿ. ಮೃತ ಪತ್ನಿಯನ್ನು 26 ವರ್ಷದ ಶಾಹಿದಾ ಭಗವಾನ್ ಎಂದು ಗುರುತಿಸಲಾಗಿದೆ.
Advertisement
ದಂಪತಿ ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ವಾಸವಿದ್ದರು. ರಂಜಾನ್ ಹಬ್ಬಕ್ಕೆ ತವರು ಮನೆಯಾದ ಹಿರೇಬೇವನೂರು ಗ್ರಾಮಕ್ಕೆ ಶಾಹಿದಾ ತೆರಳಿದ್ದಳು. ಇದಕ್ಕೆ ಕೋಪಗೊಂಡ ಪತಿ ಆಕೆಯ ತವರು ಮನೆಗೆ ಹೋಗಿ ಜಗಳವಾಡಿ ಎರಡು ವರ್ಷದ ಮಗನನ್ನು ಕರೆದುಕೊಂಡು ತನ್ನ ಮನೆಗೆ ಬಂದಿದ್ದಾನೆ
Advertisement
Advertisement
ಮಗನನ್ನು ಬಲವಂತವಾಗಿ ಎತ್ತಿಕೊಂಡು ಹೋಗಿದ್ದಕ್ಕೆ ಇಂದು ಪತಿ ವಿರುದ್ಧ ದೂರು ನೀಡಲು ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ಶಾಹಿದಾ ಹೋಗುವಾಗ ಹಿಂದಿನಿಂದ ಬೈಕಿನಲ್ಲಿ ಬಂದ ಖಾಜಾಸಾಬ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
Advertisement
ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಖಾಜಾಸಾಬ್‍ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.