ಬೈಕ್‍ನಲ್ಲಿ ಬಂದ ಮುಸುಕುಧಾರಿಗಳಿಂದ ಮಹಿಳೆ ಮೇಲೆ ಫೈರಿಂಗ್

Public TV
0 Min Read
bij

ವಿಜಯಪುರ: ಮುಸುಕುಧಾರಿಗಳಿಬ್ಬರು ಬೈಕನಲ್ಲಿ ಬಂದು ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಜಿಲ್ಲೆಯ ಇಂಡಿ ತಾಲೂಕಿನ ಮಣಂಕಲಗಿ ಗ್ರಾಮದ ಅಡವಿ ವಸ್ತಿ ಹತ್ತಿರ ತಡರಾತ್ರಿ ಈ ಘಟನೆ ನಡೆದಿದೆ. ಫೈರಿಂಗ್‍ನಲ್ಲಿ ಗಾಯಗೊಂಡಿರುವ ಮಹಿಳೆಯನ್ನ ಶೀಲವಂತಬಾಯಿ ಸತ್ಯಪ್ಪ ಕೋಳಿ(58) ಎಂದು ಗುರುತಿಸಲಾಗಿದೆ. ಗಾಯಾಳು ಮಹಿಳೆಯನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶೀಲವಂತಬಾಯಿ ಅವರ ಎಡಗಾಲಿನ ತೊಡೆಗೆ ಎರಡು ಗುಂಡುಗಳು ತಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೈರಿಂಗ್ ಯಾವ ಕಾರಣಕ್ಕಾಗಿ ಆಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.

BIJ FIRING AV 2

BIJ FIRING AV 3

BIJ FIRING AV 1

Share This Article
Leave a Comment

Leave a Reply

Your email address will not be published. Required fields are marked *