ಹಿಂದುಳಿದ ವರ್ಗಗಳ ಮೀಸಲಾತಿ 65% ಹೆಚ್ಚಳ – ಬಿಹಾರ ಸರ್ಕಾರದ ನಿರ್ಧಾರ ರದ್ದು

Public TV
1 Min Read
Patna Highcourt

ಪಾಟ್ನಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಹಾರ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. OBC, SC, ST ವರ್ಗಗಳ ಮೀಸಲಾತಿ (OBC Reservation) 65%ಗೆ ಹೆಚ್ಚಿಸುವ ಸರ್ಕಾರದ ನಿರ್ಧಾರವನ್ನು ಪಾಟ್ನಾ ಹೈಕೋರ್ಟ್‌ ರದ್ದು ಮಾಡಿದೆ.

ಹಿಂದುಳಿದ ವರ್ಗಗಳು, ಅತೀ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮೀಸಲಾತಿಯನ್ನು 50% ರಿಂದ 65%ಗೆ ಸರ್ಕಾರ ಹೆಚ್ಚಿಸಿತ್ತು. ಖಾಲಿ ಹುದ್ದೆಗಳ ಬಿಹಾರ ಮೀಸಲಾತಿ (Amendment) ಕಾಯ್ದೆ 2023 ಮತ್ತು ಬಿಹಾರ (ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ) ಮೀಸಲಾತಿ (ತಿದ್ದುಪಡಿ) ಕಾಯ್ದೆ 2023 ಸಂವಿಧಾನ 14ನೇ ವಿಧಿಯ ಅಡಿಯಲ್ಲಿ ನೀಡಲಾದ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಮುಖ್ಯನ್ಯಾಯಮೂರ್ತಿ ಕೆ. ವಿನೋದ್‌ ಚಂದ್ರನ್‌ ಹಾಗೂ ಹರೀಶ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟು ರದ್ದುಗೊಳಿಸಿದೆ.

Patna High Court 2

ಹಿಂದುಳಿದ ವರ್ಗಗಳ ಮೀಸಲಾತಿಯನ್ನು (OBC Reservation) ಶೇ.50 ರಿಂದ 65ಕ್ಕೆ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹಲವು ಮಂದಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು ಸಾವು – ಮೃತರ ಸಂಖ್ಯೆ 37ಕ್ಕೆ ಏರಿಕೆ!

ಬಿಹಾರ ಸರ್ಕಾರದ ನಿರ್ಧಾರವು ಸಂವಿಧಾನದ ವ್ಯಾಪ್ತಿಯನ್ನು ಮೀರಿದೆ. ಅಲ್ಲದೇ ಸಂವಿಧಾನ (Constitution) ವಿಧಿ 14, 15 ಮತ್ತು 16ನೇ ವಿಧಿಗಳ ಅಡಿಯಲ್ಲಿ ಸಮಾನತೆಯ ಷರತ್ತನ್ನು ಉಲ್ಲಂಘಿಸುತ್ತವೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಗ್ರಾಹಕರಿಗೆ ಗುಡ್‌ನ್ಯೂಸ್‌ – ದರ ಕಡಿತ, ಭಾರೀ ಆಫರ್‌ ಪ್ರಕಟಿಸಿದ ಕಾರು ಕಂಪನಿಗಳು

NITISH KUMAR

2023ರ ನವೆಂಬರ್‌ ತಿಂಗಳಲ್ಲಿ ಬಿಹಾರ ವಿಧಾನಸಭೆಯು ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅನುಪಸ್ಥಿತರಾಗಿದ್ದರು. ತಿದ್ದುಪಡಿ ಮಾಡಲಾದ ಮೀಸಲಾತಿ ಕೋಟಾವು ಪರಿಶಿಷ್ಟ ಜಾತಿಗಳಿಗೆ 20%, ಪರಿಶಿಷ್ಟ ಪಂಗಡಗಳಿಗೆ 2% , ಇತರೇ ಹಿಂದುಳಿದ ವರ್ಗಗಳಿಗೆ ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ 43% ಮೀಸಲಾತಿ ಒಳಗೊಂಡಿತ್ತು.

Share This Article