ಪಾಟ್ನಾ: ಯುವತಿಯೊಬ್ಬಳು ತಾನು ತೆರೆದ ಚಹಾದ ಮಳಿಗೆಯನ್ನು ಅಧಿಕಾರಿಗಳು ಬಂದ್ ಮಾಡಿದ್ದಕ್ಕೆ ಕಣ್ಣೀರಿಟ್ಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
“बिहार में महिलाओं के लिए गुनाह है ‘स्वावलंबी’ बनना”
◆ ठेला ज़ब्त होने पर रो-रोकर बोली ग्रेजुएट चायवाली pic.twitter.com/lamHQ3y8av
— News24 (@news24tvchannel) November 15, 2022
Advertisement
ಅರ್ಥಶಾಸ್ತ್ರ ಪದವೀಧರೆಯಾಗಿದ್ದ ಪ್ರಿಯಾಂಕಾ ಗುಪ್ತಾ (Priyanka Gupta) 2 ವರ್ಷಗಳಿಂದ ಅಲೆದಾಡಿ ಕೆಲಸ ಸಿಗದೇ ಚಹಾದ ಅಂಗಡಿ ತೆರೆದಿದ್ದರು. ಟೀ ಸ್ಟಾಲ್ (Tea Stall) ತೆರೆಯಲು ಪೊಲೀಸ್ ಕಮೀಷನರ್ ಬಳಿ ಅನುಮತಿ ಪಡೆದು ಇತರ ದಾಖಲೆ ಎಲ್ಲವನ್ನು ಹೊಂದಿದ್ದ ಪ್ರಿಯಾಂಕ `ಗ್ರಾಜುವೇಟ್ ಚಾಯಿವಾಲಿ’ (Graduate Chaiwali) ಎಂದು ಹೆಸರಿಟ್ಟಿದ್ದರು. ಚಾಯ್ ಸ್ಪೆಷಲಿಸ್ಟ್ ಆಗಿದ್ದ ಇವರ ಕೈ ರುಚಿ ಯುವಜನರನ್ನು ಬೇಗನೆ ಸೆಳೆಯುತ್ತಿದ್ದರು. ಉತ್ತಮವಾಗಿ ವ್ಯಾಪಾರ ನಡೆಯುತ್ತಿದ್ದ ಟೀಸ್ಟಾಲ್ ಅನ್ನು ರಾತ್ರೋರಾತ್ರಿ ಅಧಿಕಾರಿಗಳು ತೆರವು ಮಾಡಿಬಿಟ್ಟಿದ್ದರು. ಇದಾದ ಬಳಿಕ ಪ್ರಿಯಾಂಕ ಅವರ ಟೀಸ್ಟಾಲ್ ಗೆ ನಾನಾ ತೊಂದರೆಗಳು ಶುರುವಾಯಿತು. ಇದರಿಂದ ಬೇಸತ್ತು ಹೋದ ಪ್ರಿಯಾಂಕ ಸ್ಥಳೀಯ ರಾಜಕೀಯ ಮುಖಂಡರ (Political Leader) ಬಳಿ ಮನವಿ ಮಾಡಿ ಟೀಸ್ಟಾಲನ್ನು ಮತ್ತೆ ಅದೇ ಜಾಗದಲ್ಲಿ ಇಟ್ಟಿದ್ದರು.
Advertisement
Advertisement
ಇತ್ತೀಚೆಗೆ ಮತ್ತೊಮ್ಮೆ `ಗ್ರಾಜುವೇಟ್ ಚಾಯಿವಾಲಿ’ ಸ್ಟಾಲ್ ತೆರವಿಗೆ ಬಿಹಾರದ ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ನೋಟಿಸ್ ನೀಡಿದ್ದು, ಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನುವ ಕಾರಣ ಕೊಟ್ಟಿದ್ದಾರೆ. ಇದರಿಂದ ಪ್ರಿಯಾಂಕಾ ಭಾವುಕರಾಗಿ ಅಧಿಕಾರಿಗಳ ವಿರುದ್ಧ, ವ್ಯವಸ್ಥೆಯ ವಿರುದ್ಧ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ
Advertisement
ಇಲ್ಲಿ ಹೆಣ್ಣು ಎಂದರೆ ಅಡುಗೆ ಮನೆಯಲ್ಲಿ ಇರಲು ಲಾಯಕ್ಕು. ಹೆಣ್ಣಿಗೆ ಮುಂದುವರೆಸಲು ಅವಕಾಶವಿಲ್ಲ. ಬಿಹಾರದ ಪಾಟ್ನಾದಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಹಲವು ಅಕ್ರಮ ಕೆಲಸಗಳು ನಡೆಯುತ್ತವೆ. ಇಲ್ಲಿ ವ್ಯವಸ್ಥೆ ಜೀವಂತವಾಗಿಲ್ಲ. ಇಲ್ಲಿ ಹೆಣ್ಣೊಬ್ಬಳು ವ್ಯಾಪಾರ ಆರಂಭಿಸಿದರೆ ಅವಳಿಗೆ ಪದೇ ಪದೇ ಅಡ್ಡಗಾಲು ಹಾಕುತ್ತಾರೆ. ನನ್ನ ಜೀವನವು ಅಡುಗೆ ಮನೆಗೆ, ನೆಲ ಗುಡಿಸೋದಕ್ಕೆ, ಮದುವೆಯಾಗೋಕೆ ಇದೆಯೇ ಹೊರತು ಮನೆಯಿಂದ ಹೊರಬಂದು ಸ್ವಂತ ವ್ಯವಹಾರ ಮಾಡೋದಕ್ಕೆ ಅಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಂತ ಉದ್ಯಮದ ಕನಸು ನನಸು – B ಟೆಕ್ ವಿದ್ಯಾರ್ಥಿನಿ ಈಗ `ಚಾಯ್‌ವಾಲಿ’
ಕೆಲವರು ಇದಕ್ಕೆ ಋಣಾತ್ಮಕ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ, ಧನ್ಯವಾದಗಳು, ನೀವು ಮಹಿಳೆಯಾಗಿದ್ದೀರಿ, ಮನೆಯಲ್ಲಿದ್ದೀರಿ, ಹೊರಗೆ ಏನನ್ನೂ ಮಾಡುವ ಅಗತ್ಯವಿಲ್ಲ ಏಕೆಂದರೆ ಅದು ಬಿಹಾರ ಎಂದು ಹೇಳಿದ್ದಾರೆ.