– ಬಿಹಾರದಲ್ಲಿ ವಿರೂಪಗೊಂಡ ಮಗು ಜನನ
– ಹನುಮಾನ್ ಅವತಾರ ಅಂತಿದ್ದಾರೆ ಸ್ಥಳೀಯರು
ಪಾಟ್ನಾ: ಬಿಹಾರದ ಕತಿಹಾರ್‍ನಲ್ಲಿ ಮಹಿಳೆಯೊಬ್ಬರು ವಿರೂಪಗೊಂಡ ಮಗುವಿಗೆ ಜನ್ಮ ನೀಡಿದ್ದಾರೆ.
ನಾಲ್ಕು ಮಕ್ಕಳ ತಾಯಿಯಾಗಿರೋ 35 ವರ್ಷದ ಖಾಲಿದಾ ಬೇಗಂ ಜನ್ಮ ನೀಡಿರೋ ಈ ಮಗುವಿನ ತಲೆ ಮುದುರಿ ಹೋಗಿದ್ದು, ಕಣ್ಣುಗಳು ಉಬ್ಬಿಕೊಂಡಿವೆ. ತಾನೇ ಜನ್ಮ ನೀಡಿರೋ ಮಗುವಿನ ರೂಪ ಕಂಡು ತಾಯಿ ಖಲೀದಾ ಶಾಕ್ ಆಗಿದ್ರು. ಮಗು ನೋಡಲು ಏಲಿಯನ್ ರೀತಿ ಇದೆ ಎಂದು ಹೇಳಿ ಮೊದಲಿಗೆ ಹಾಲುಣಿಸೋದಕ್ಕೂ ನಿರಾಕರಿಸಿದ್ದರು.
Advertisement
ಮಗುವಿನ ಅನೇಕ ಅಂಗಾಗಗಳು ಸರಿಯಾಗಿ ಬೆಳವಣಿಗೆ ಹೊಂದಿಲ್ಲ. ಡೆಲಿವರಿ ಆದ ನಂತರ ಮೊದಲ ಬಾರಿಗೆ ನಾನು ಮಗು ನೋಡಿ ಶಾಕ್ ಆದೆ. ತುಂಬಾ ಬೇಜಾರಾಗಿ ಮಗುವನ್ನು ನನ್ನ ಕಣ್ಣಿಂದ ದೂರ ಕರೆದುಕೊಂಡು ಹೋಗಿ ಎಂದು ಹೇಳಿದೆ ಅಂತ ಖಲೀದಾ ಹೇಳಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
Advertisement
ಖಾಲಿದಾ ಮಗುವನ್ನ ತಿರಸ್ಕರಿಸಿದ್ರೂ, ಮಗುವಿನ ತಂದೆ ಮೊಹಮ್ಮದ್ ಇಮ್ತಿಯಾಸ್ ಸೇರಿದಂತೆ ಇಲ್ಲಿನ ಸ್ಥಳೀಯರು ಇದು ಹನುಮಾನ್ ಅವತಾರ ಎಂದು ಮಾತಾಡಿಕೊಳ್ಳುತ್ತಿದ್ದಾರೆ.
Advertisement
ವೈದ್ಯರ ಪ್ರಕಾರ ನವಜಾತ ಮಗುವಿಗೆ ಹರ್ಲೆಕ್ವಿನ್ ಇಕ್ತ್ಯೋಸಿಸ್ ಎಂಬ ಅನುವಂಶಿಕ ತೊಂದರೆಯಿದ್ದು, ಈ ಸಮಸ್ಯೆ ಇರುವವರಿಗೆ ಚರ್ಮ ದಪ್ಪವಾಗಿ ಅಂಗಾಂಗಗಳು ವಿರೂಪಗೊಂಡಿರುತ್ತವೆ. ಅಲ್ಲದೆ ಈ ಮಗುವಿಗೆ ಅನಾನ್ಸೆಫಲಿ ತೊಂದರೆ ಇರಬಹುದು ಎಂದು ಕೂಡ ತಜ್ಞರು ಊಹಿಸಿದ್ದಾರೆ.