ಪಾಟ್ನಾ: ಕೋಟಿ ಕೋಟಿ ಹಣ ಖರ್ಚು ಮಾಡಿದರೂ, ನಾನಾ ರೀತಿಯಲ್ಲಿ ಜನರ ಮನವೊಲಿಸಲು ಪ್ರಯತ್ನಿಸಿದರೂ ಎಷ್ಟೋ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋಲು ಕಾಣುತ್ತಾರೆ. ಆದರೆ ಬಿಹಾರ್‌ನಲ್ಲಿ ವ್ಯಕ್ತಿಯೊಬ್ಬರು ತಾನು ಮೃತಪಟ್ಟ ನಂತರವೂ ಜನರಿಂದ ವೋಟು ಪಡೆದು ಗೆಲುವು ಸಾಧಿಸಿದ್ದಾರೆ.
ಹೌದು, ಇದು ನಿಮಗೆ ಅಚ್ಚರಿ ಎನಿಸಿದರೂ ನಿಜ. ಬಿಹಾರ್‌ನ ಜಮೈ ಜಿಲ್ಲೆಯ ಪಂಚಾಯಿತಿ ಚುನಾವಣೆಯಲ್ಲಿ ಮೃತ ವ್ಯಕ್ತಿಗೆ ಗೌರವಾರ್ಥವಾಗಿ ಜನರು ಮತ ಹಾಕಿ ಗೆಲ್ಲಿಸಿದ್ದಾರೆ. ಮೃತ ವ್ಯಕ್ತಿ ಸೋಹನ್ ಮರ್ಮು ಎಂಬಾತ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾನೆ ಎಂದು ನ.24 ರಂದು ಅಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಹಸು ಜೊತೆಗೆ ವಿವಾಹವಾದ ಮಹಿಳೆ
Advertisement
Advertisement
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ಸಮಾರಂಭದಲ್ಲಿ ಸೋಹನ್ ಮರ್ಮು ಇರಲಿಲ್ಲ. ಅನುಮಾನಗೊಂಡು ಗ್ರಾಮಸ್ಥರಲ್ಲಿ ವಿಚಾರಿಸಿದಾಗ, ಆತ ನ.6ರಂದೇ ಅಂದರೆ ಮತದಾನದ ಮುನ್ನಾದಿನ ತೀರಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಬಿಡಿಒ ರಾಘವೇಂದ್ರ ತ್ರಿಪಾಠಿ ತಿಳಿಸಿದ್ದಾರೆ.
Advertisement
ಸೋಹನ್ ಮರ್ಮು ಗೆಲುವು ಸಾಧಿಸಿದ ಗ್ರಾಮ ದೀಪಕರ್ಹರ್. ಜಾರ್ಖಂಡ್ ರಾಜ್ಯದ ಗಡಿಯುದ್ದಕ್ಕೂ ಇರುವ ಕುಗ್ರಾಮ ಇದಾಗಿದೆ. ಇಲ್ಲಿ ಬುಡಕಟ್ಟು ಸಮುದಾಯದ ಜನರೇ ಹೆಚ್ಚಿದ್ದಾರೆ. ಕೇಂದ್ರ ಗೃಹ ಸಚಿವಾಲಯವು ಕೆಲವು ವರ್ಷಗಳ ಹಿಂದೆ ಪ್ರಕಟಿಸಿದ ಪಟ್ಟಿಯ ಪ್ರಕಾರ, 1990ರ ದಶಕದಲ್ಲಿ ನಕ್ಸಲ್ ಚಟುವಟಿಕೆಯಿಂದ ಹಾನಿಗೊಳಗಾದ ಗ್ರಾಮ ಇದಾಗಿದೆ. ಇದನ್ನೂ ಓದಿ: ಕಾರಿನಲ್ಲಿ ತೆರಳುತ್ತಿದ್ದಾಗ ಮಹಿಳೆಗೆ ಡ್ರಗ್ಸ್ ನೀಡಿ ಅತ್ಯಾಚಾರ- ಸೇನಾ ಸಿಬ್ಬಂದಿ ಅರೆಸ್ಟ್
Advertisement
ಸೋಹನ್ 28 ಮತಗಳಿಂದ ಪ್ರತಿಸ್ಪರ್ಧಿಯನ್ನು ಸೋಲಿಸಿದ್ದಾನೆ. ಆತ ಮೃತಪಟ್ಟಿರುವ ವಿಷಯವನ್ನು ಕುಟುಂಬದವರು ಹಾಗೂ ಗ್ರಾಮಸ್ಥರು ಯಾರಿಗೂ ತಿಳಿಯದಂತೆ ಮುಚ್ಚಿಟ್ಟಿದ್ದರು. ಮೃತರಿಗೆ ಗೌರವಾರ್ಥವಾಗಿ ಗ್ರಾಮಸ್ಥರೆಲ್ಲ ಮತ ಹಾಕಿದ್ದಾರೆ ಎಂದು ಬಿಡಿಒ ತ್ರಿಪಾಠಿ ವಿವರಿಸಿದ್ದಾರೆ.
ಗೆಲುವಿನ ಪ್ರಮಾಣ ಪತ್ರವನ್ನು ನಾವು ಯಾರಿಗೂ ನೀಡಿಲ್ಲ. ಸಂಬಂಧಪಟ್ಟ ವಾರ್ಡ್‌ನ ಚುನಾವಣೆಯನ್ನು ಅನೂರ್ಜಿತಗೊಳಿಸಿ ಹೊಸದಾಗಿ ಚುನಾವಣೆ ನಡೆಸಬೇಕು ಎಂಬ ಮನವಿಯೊಂದಿಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದ್ದೇವೆ ಎಂದು ತ್ರಿಪಾಠಿ ತಿಳಿಸಿದ್ದಾರೆ.