ಪಾಟ್ನಾ: ರೈಲ್ವೆ(Train) ಪ್ರಯಾಣಿಕನ ಮೊಬೈಲ್ ಕಳವು ಮಾಡಲು ಹೋಗಿ ಸಿಕ್ಕಿಬಿದ್ದು ಕಳ್ಳನೋರ್ವ(Thief) 10 ಕಿ.ಮೀವರೆಗೂ ಜೋತಾಡುತ್ತಾ, ಮತ್ತೊಮ್ಮೆ ಈ ರೀತಿ ಮಾಡುವುದಿಲ್ಲ ಕ್ಷಮಿಸಿ ಎಂದು ಫಜೀತಿ ಮಾಡಿಕೊಂಡಿದ್ದಾನೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ಸೆಪ್ಟೆಂಬರ್ 14ರಂದು ಬಿಹಾರದಲ್ಲಿ(Bihar) ಈ ಘಟನೆ ನಡೆದಿದ್ದು, ರೈಲಿನ ಕಿಟಕಿ(Window) ಬಳಿ ಕುಳಿತಿದ್ದ ಪ್ರಯಾಣಿಕನ(Passengers) ಮೊಬೈಲ್ ಕಳ್ಳತನ ಮಾಡಲು ಹೋಗಿ ಕಳ್ಳ ಸಿಕ್ಕಿಬಿದ್ದು ತಪ್ಪಿಕೊಳ್ಳಲಾಗದೇ ನರಳಾಡಿದ್ದಾನೆ. ಇದನ್ನೂ ಓದಿ: 8 ವರ್ಷದ ಬಳಿಕ ಗೊತ್ತಾಯ್ತು ತನ್ನ ಪತಿ ಅವನಲ್ಲ ಅವಳು – ಗಂಡನ ಲಿಂಗ ಬದಲಾವಣೆ ತಿಳಿದು ಮಹಿಳೆ ಶಾಕ್
Advertisement
WATCH | Bihar Thief’s Train Hangout: He Dangles Outside As Passengers Hold Arms pic.twitter.com/dvWqEbRATB
— NDTV (@ndtv) September 15, 2022
Advertisement
ರೈಲು ಬೇಗುಸರಾಯ್‍ನಿಂದ(Begusarai) ಖಗರಿಯಾಗೆ (Khagaria) ಹೊರಟಿತ್ತು. ಈ ಮಧ್ಯೆ ಸಾಹೇಬ್‍ಪುರ ಕಮಲ್ (Sahebpur Kamal) ನಿಲ್ದಾಣದ ಬಳಿ ವ್ಯಕ್ತಿ ತನ್ನ ಕೈಯನ್ನು ಕಿಟಕಿ ಒಳಗೆ ಹಾಕಿ ಪ್ರಯಾಣಿಕನ ಮೊಬೈಲ್(Mobile) ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಇದರಿಂದ ಎಚ್ಚೆತ್ತುಕೊಂಡ ಪ್ರಯಾಣಿಕ ಆತನ ಕೈ ಹಿಡಿದುಕೊಂಡಿದ್ದಾನೆ. ಈ ವೇಳೆ ರೈಲು ಚಲಿಸಲು ಆರಂಭಿಸಿದೆ. ಆಗ ಕಳ್ಳ ದಯವಿಟ್ಟು ನನ್ನ ಕೈ ಬಿಡಿ ಎಂದು ಅಳುತ್ತಾ ಬೇಡಿಕೊಂಡಿದ್ದಾನೆ. ಆದರೂ ಪ್ರಯಾಣಿಕ ಆತನ ಕೈ ಬಿಡದೇ ಸತಾಯಿಸಿದ್ದಾನೆ. ಹೀಗಾಗಿ 10 ಕಿ.ಮೀವರೆಗೂ(10 kilometers) ಕಿಟಕಿ ಬಳಿ ತೂಗಾಡುತ್ತಾ, ಜೋತಾಡುತ್ತಾ ಕಳ್ಳ ಬಿಡಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡಿದ್ದಾನೆ.
Advertisement
Advertisement
ಕೊನೆಗೆ 10 ಕಿಲೋಮೀಟರ್‌ಗಳವರೆಗೂ ಹೀಗೆ ಸಾಗಿ ನಂತರ ರೈಲು ಖಗಾರಿಯಾಕ್ಕೆ ಹೋಗುತ್ತಿದ್ದ ವೇಳೆ ಆತನ ಕೈ ಬಿಟ್ಟಿದ್ದಾರೆ. ಕೈ ಬಿಟ್ಟ ಕೂಡಲೇ ಕಳ್ಳ ದಿಕ್ಕಾಪಾಲಾಗಿ ಓಡಿಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು(Police) ಯಾವುದಾದರೂ ಕ್ರಮ ಕೈಗೊಂಡಿದ್ದಾರೆಯೋ ಇಲ್ಲವೋ ಎಂಬುವುದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಇದನ್ನೂ ಓದಿ: ಗಂಟೆಗೆ 130 ಕಿ.ಮೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದ ಕಾರು – ಮಹಿಳಾ ಟೆಕ್ಕಿಗಳಿಬ್ಬರ ದುರ್ಮರಣ