ಪಾಟ್ನಾ: ವಿಷಕಾರಿ ಹಾವಿನಿಂದ ಕಡಿಸಿಕೊಂಡ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಕೈಯನ್ನು ಕಚ್ಚಿದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.
ಇಲ್ಲಿನ ಬಿರ್ಸಿಂಗ್‍ಪುರ ಗ್ರಾಮದ ನಿವಾಸಿಯಾದ ಶಂಕರ್ ರೈ ಮಲಗಿದ್ದ ವೇಳೆ ವಿಷಕಾರಿ ಹಾವೊಂದು ಕಚ್ಚಿತ್ತು. ಶಂಕರ್ ಎಚ್ಚರಗೊಂಡಾದ ಅವರ ಪರಿಸ್ಥಿತಿ ತುಂಬಾ ಗಂಭಿರವಾಗಿದ್ದು, ತುಂಬಾ ಭಾವುಕರಾಗಿದ್ರು. ಇನ್ನು ನಾನು ಉಳಿಯಲ್ಲ ಅಂತ ಗೊತ್ತಾಗಿ ಶಂಕರ್ ತನ್ನ ಹೆಂಡತಿ ಅಮಿರಿ ದೇವಿ ಬಳಿ ಹೋಗಿ, ನಾನು ನಿನ್ನನ್ನ ತುಂಬಾ ಪ್ರೀತಿಸ್ತೀನಿ. ನಾವಿಬ್ಬರೂ ಒಟ್ಟಿಗೆ ಸಾಯಬೇಕು ಎಂದು ಹೇಳಿ ಅವರ ಕೈಯನ್ನು ಕಚ್ಚಿದ್ದಾರೆ.
Advertisement
ಶಂಕರ್ ಅಮಿರಿ ಅವರನ್ನ ಕಚ್ಚಿದ ನಂತರ ಇಬ್ಬರೂ ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಂಕರ್ ಸಾವನ್ನಪ್ಪಿದ್ದಾರೆ. ವೈದ್ಯರು ಅಮಿರಿ ಅವರ ಪ್ರಾಣ ಉಳಿಸುವಲ್ಲಿ ಸಫಲರಾಗಿದ್ದಾರೆ.
Advertisement
ಇದನ್ನೂ ಓದಿ: ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ
Advertisement
ಸರಿಯಾದ ಸಮಯಕ್ಕೆ ಚಿಕಿತ್ಸೆ ಆರಂಭಿಸಿದ್ದರಿಂದ ಮಹಿಳೆಯ ಪ್ರಾಣ ಉಳಿದಿದೆ. ಅವರೀಗ ಸುರಕ್ಷಿತವಾಗಿದ್ದಾರೆ ಅಂತ ಸ್ಥಳೀಯ ವೈದ್ಯರಾದ ಡಾ. ಜಯಕಾಂತ್ ಇಲ್ಲಿನ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
Advertisement
ಅಮಿರಿ ದೇವಿ ಹೇಳುವ ಪ್ರಕಾರ, ಪತಿ ಶಂಕರ್ ಜೋರಾಗಿ ಕೈಯನ್ನು ಕಚ್ಚಿದ್ದು, ಒಟ್ಟಿಗೆ ಸಾಯಬೇಕೆಂದಿದ್ದರು. ಸಾವಿನ ಬಳಿಕವೂ ಇಬ್ಬರೂ ಜೊತೆಯಾಗಿರಬೇಕೆಂದು ಬಯಸಿದ್ದರು. ಆದ್ರೆ ಅವರ ಆಸೆ ಈಡೇರಲಿಲ್ಲ.
ನನ್ನ ಪತಿ ನನ್ನನ್ನು ತುಂಬಾ ಪ್ರೀತಿಸುತ್ತೇನೆ ಅಂತ ಹೇಳಿದ್ರು. ಒಟ್ಟಿಗೆ ಸಾಯಬೇಕೆಂದು ನನ್ನ ಕೈಗೆ ಜೋರಾಗಿ ಕಚ್ಚಿದ್ರು. ಅವರು ಕಚ್ಚಲು ನಾನು ಸಮ್ಮತಿಸಿದೆ ಎಂದು ಅಮಿರಿ ದೇವಿ ಹೇಳಿದ್ದಾರೆ.
ಇದನ್ನೂ ಓದಿ: ಕಾಫಿ ತೋಟದಲ್ಲಿ ಕೇರೆ ಹಾವು ನುಂಗಿದ್ದ ಕಾಳಿಂಗ ಸರ್ಪ ಸೆರೆ- ವಿಡಿಯೋ ನೋಡಿ
https://www.youtube.com/watch?v=23e5Ur5e-qs