ಪಾಟ್ನಾ: ನಿವೃತ್ತ ಆಯುಕ್ತ ಹಾಗೂ ಅವರ ಪತ್ನಿಯನ್ನು ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ ಬಿಹಾರ ರಾಜಧಾನಿ ಪಾಟ್ನಾ ಸಮೀಪದ ಬುದ್ಧ ಕಾಲೊನಿಯಲ್ಲಿ ನಡೆದಿದೆ.
ನೀರಾವರಿ ಇಲಾಖೆಯ ನಿವೃತ್ತ ಆಯುಕ್ತ ಹರೇಂದ್ರ ಪ್ರಸಾದ್ (82) ಹಾಗೂ ಅವರ ಪತ್ನಿ ಸಾಧನಾ ಗುಪ್ತಾ ಕೊಲೆಯಾದವರು. ಶುಕ್ರವಾರ ಬೆಳಗ್ಗೆ ತನಿಖೆ ಆರಂಭಿಸಿದ ಪೊಲೀಸರು ಚಾಲಕ ಸೇರಿದಂತೆ ಒಟ್ಟು 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Advertisement
ಹರೇಂದ್ರ ಪ್ರಸಾದ್ ಹಾಗೂ ಅವರ ಪತ್ನಿಯನ್ನು ಸಂಬಂಧಿಕರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಆಸ್ಪತ್ರೆಗೆ ತರುವ ಮುನ್ನವೇ ಅವರು ಮೃತಪಟ್ಟಿದ್ದಾರೆ ಅಂತ ವೈದ್ಯರು ಖಚಿತಪಡಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಮನು ಮಹಾರಾಜ್ ಮಾಹಿತಿ ನೀಡಿದ್ದಾರೆ.
Advertisement
ಪ್ರಾಥಮಿಕ ವರದಿಯ ಪ್ರಕಾರ ದಂಪತಿಯನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಮೃತ ದೇಹಗಳ ಮೇಲೆ ಹಲ್ಲೆ ಮಾಡಿರುವ ಗುರುತುಗಳಿವೆ ಹಾಗೂ ಇಬ್ಬರ ತಲೆಗೂ ಬಲವಾಗಿ ಹೊಡೆಯಲಾಗಿದೆ ಎಂದು ಮಹಾರಾಜನ್ ತಿಳಿಸಿದ್ದಾರೆ.
Advertisement
ತನಿಖೆ ಆರಂಭವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ ಚಾಲಕ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಂಬಂಧಿಕರು ಕೂಡಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
Advertisement
ಕೊಲೆಯಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದು, ಬುದ್ಧ ಕಾಲೊನಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Patna: Retd. commissioner (irrigation dept) Harendra Prasad & his wife Sadhana were found dead at their residence in Buddha Colony yesterday; SSP Manu Maharaj said, 'It's murder. We've suspicions about several people. We are investigating & we'll solve it soon'. #Bihar pic.twitter.com/uSubQnMJvc
— ANI (@ANI) September 7, 2018