ಪಾಟ್ನಾ: ಬಿಹಾರದ (Bihar) ರೋಹ್ತಾಸ್ ಜಿಲ್ಲೆಯ ಸಸಾರಾಮ್ (Sasaram) ನಗರದಲ್ಲಿ ಬಾಂಬ್ ಸ್ಫೋಟಗೊಂಡು (Bomb Blast) 6 ಜನರು ಗಾಯಗೊಂಡ ಘಟನೆ ನಡೆದು 2 ದಿನಗಳಾದ ಬಳಿಕ ಮತ್ತೆ ಸೋಮವಾರ ಮುಂಜಾನೆ ಸ್ಫೋಟದ (Explosion) ಸದ್ದು ಕೇಳಿ ಬಂದಿದೆ.
ಸೋಮವಾರ ಮುಂಜಾನೆ ನಗರದ ಮೋಚಿ ತೋಲಾ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಬ್ ಇನ್ಸ್ಪೆಕ್ಟರ್ ರಾಮ್ ನರೇಶ್ ಸಿಂಗ್, ನಾವು ಮುಂಜಾನೆ ಸ್ಫೋಟದಂತಹ ಶಬ್ದವನ್ನು ಕೇಳಿದ್ದೇವೆ. ಆದರೆ ಅದು ಬಾಂಬ್ ಸ್ಫೋಟವೇ ಅಥವಾ ಪಟಾಕಿಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: 36 ಮಂದಿ ಸಾವಿಗೆ ಕಾರಣವಾಗಿದ್ದ ಇಂದೋರ್ ದೇವಸ್ಥಾನ ನೆಲಸಮ
Advertisement
Advertisement
ಮಾರ್ಚ್ 31 ರಂದು ರಾಮನವಮಿ ಮೆರವಣಿಗೆಯ ಬಳಿಕ ಸಸಾರಾಮ್ನಲ್ಲಿ 2 ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಈ ಪ್ರದೇಶದಲ್ಲಿ ಕಲ್ಲು ತೂರಾಟವೂ ನಡೆದಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅಧಿಕಾರಿಗಳು ಸಸಾರಮ್ ನಗರದಲ್ಲಿ ಸಿಆರ್ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದ್ದಾರೆ.
Advertisement
ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ನಂತರ ಸರಣಿ ಘರ್ಷಣೆಗಳು ವರದಿಯಾಗಿವೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಪೊಲೀಸರು ಮತ್ತು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ದುಷ್ಕರ್ಮಿಗಳನ್ನು ಹಿಡಿಯಲು ಬಿಹಾರ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಸಸಾರಾಮ್ನಿಂದ ಇದುವರೆಗೆ 43 ಜನರನ್ನು ಬಂಧಿಸಲಾಗಿದೆ ಮತ್ತು 3 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಸಸಾರಾಮ್ ನಗರದಾದ್ಯಂತ 27 ಸ್ಥಳಗಳಲ್ಲಿ ಭಾರೀ ಪಡೆಗಳನ್ನು ನಿಯೋಜಿಸಲಗಿದೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ವ್ಯಕ್ತಿ – ಮೂವರು ಸಾವು