ನಟೋರಿಯಸ್ ಗ್ಯಾಂಗ್‍ಸ್ಟಾರ್ ಸೆರೆ ಹಿಡಿದ ನಯನತಾರಾ!

Public TV
1 Min Read
nayanthara

ಪಾಟ್ನಾ: ಪೊಲೀಸರು ತುಂಬಾ ಬುದ್ಧಿವಂತಿಕೆಯಿಂದ ದಕ್ಷಿಣ ಭಾರತದ ಪ್ರಸಿದ್ಧ ನಟಿ ನಯನತಾರಾ ಫೋಟೋ ಬಳಸಿ ನಟೋರಿಯಸ್ ಗ್ಯಾಂಗ್‍ಸ್ಟಾರ್ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಮಹಮ್ಮದ್ ಹಸ್‍ನೈನ್ ನಯನತಾರಾ ಫೋಟೋ ನೋಡಿ ಬಲೆಗೆ ಬಿದ್ದ ಕಳ್ಳ. ಹಿರಿಯ ಪೊಲೀಸ್ ಅಧಿಕಾರಿ ಮಧುಬಾಲಾ ದೇವಿ ನಯನತಾರಾ ಅವರಂತೆ ಫೋಸ್ ಕೊಟ್ಟು ಗ್ಯಾಂಗ್‍ಸ್ಟರ್ ನನ್ನು ಚಾಣಾಕ್ಷತೆಯಿಂದ ಬಂಧಿಸಿದ್ದಾರೆ.

nayanthara 22

ಬಿಹಾರದ ದರ್ಬಾಂಗ್ ಜಿಲ್ಲೆಯ ಬಿಜೆಪಿ ನಾಯಕ ಸಂಜಯ್ ಕುಮಾರ್ ಮಹಾಟೋ ಮೊಬೈಲ್ ಅನ್ನು ಮೊಹಮ್ಮದ್ ಹಸ್‍ನೈನ್ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಬಿಜೆಪಿ ನಾಯಕ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿ ಮಧುಬಾಲಾ ದೇವಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮೊಬೈಲ್‍ನ ಡೇಟಾ ರೆಕಾರ್ಡ್ ಮಾಡಿ ಟ್ರೇಸ್ ಮಾಡಿದಾಗ ಆತ ಇನ್ನೂ ಫೋನ್ ಬಳಸುತ್ತಿರುವ ಸಂಗತಿ ತಿಳಿಯಿತು.

ಪ್ರೀತಿಸಿ ಬಂಧಿಸಿದ್ರು: ಪೊಲೀಸರು ಆತನನ್ನು ಬಂಧಿಸಲು ಹೋದಾಗ ಹಲವು ಬಾರಿ ಆತ ತಪ್ಪಿಸಿಕೊಂಡ ಹೋಗಿದ್ದ. ಆದ್ದರಿಂದ ಮಧುಬಾಲಾ ಆರೋಪಿ ಬಂಧನಕ್ಕೆ ಹೊಸ ಪ್ಲ್ಯಾನ್ ಮಾಡಿದ್ದರು. ಅಂತೆಯೇ ಅವರು ಯುವತಿಯಂತೆ ಆತನನ್ನು ಪ್ರೀತಿಸುವ ನಾಟಕವಾಡಿದರು. ಆದರೆ ಕಳ್ಳ ಮೊದಲು ನಂಬಿರಲಿಲ್ಲ. ಬಳಿಕ ಫೋಟೋ ಕಳಿಸುವಂತೆ ಹೇಳಿದ್ದಾನೆ. ಅದಕ್ಕೆ ಮಧುಬಾಲಾ ಅವರು ಬುದ್ಧಿವಂತಿಕೆಯಿಂದ ನಯನತಾರಾ ಫೋಟೋವನ್ನು ಕಳುಹಿಸಿದ್ದಾರೆ.

Capture 3

ಮೊಹಮ್ಮದ್ ನಟಿಯ ಫೋಟೋ ನೋಡಿ ಮರುಳಾಗಿ ಭೇಟಿ ಮಾಡಲು ಒಪ್ಪಿಕೊಂಡು ಸ್ಥಳವನ್ನು ತಾನೇ ಹೇಳಿದ್ದಾನೆ. ಈತ ಹೇಳಿದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಸಾಮಾನ್ಯ ವ್ಯಕ್ತಿಗಳಂತೆ ಆತ ಬರುವುದಕ್ಕೂ ಮೊದಲೇ ಹೋಗಿದ್ದರು. ಮಧುಬಾಲಾ ಅವರು ಮುಖಕ್ಕೆ ಮುಸುಕು ಹಾಕಿಕೊಂಡು ಆತನ ಬಳಿಗೆ ಹೋಗಿದ್ದಾರೆ. ಕೂಡಲೇ ಬಂದಿರುವ ಯುವತಿ ನನ್ನ ಸ್ನೇಹಿತೆ ಎಂದು ಮಾತನಾಡಿಸಲು ಹೋದಾಗ ಅಲ್ಲೇ ಇದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮೊಬೈಲ್ ತಮ್ಮ ವಶಕ್ಕೆ ಪಡೆದು ಬಿಜೆಪಿ ನಾಯಕರಿಗೆ ಒಪ್ಪಿಸಿದ್ದಾರೆ. ಬುದ್ಧಿವಂತಿಕೆಯಿಂದ ಕಳ್ಳನನ್ನು ಬಂಧಿಸಿದ್ದಕ್ಕೆ ಮಧುಬಾಲಾ ದೇವಿಗೆ ಬಿಹಾರ ಪೊಲೀಸ್ ಇಲಾಖೆ ಬಹುಮಾನವನ್ನು ನೀಡಿ ಗೌರವಿಸಿದೆ.

police1

police3

police4

arrested 3

nayanthara 01

nayantara 143824267870

nayan new

Share This Article
Leave a Comment

Leave a Reply

Your email address will not be published. Required fields are marked *