ಚಿಕ್ಕಬಳ್ಳಾಪುರ: ಕ್ವಾರಿ ಹೊಂಡದ ನೀರಿನಲ್ಲಿ ಈಜಲು ಹೋದ ಕಾರ್ಮಿಕನೊರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಕಣಿವೆನಾರಾಯಣಪುರದ ಬಳಿ ನಡೆದಿದೆ.
ಬಿಹಾರ (Bihar) ಮೂಲಕದ ಮಹಮ್ಮದ್ ಕೈಫ್(27) ಮೃತ ದುರ್ದೈವಿ. ಇದನ್ನೂ ಓದಿ: ಕ್ರೈಸ್ತ ಧರ್ಮದ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ನಿಧನ
ಕೈಫ್ ಮುದ್ದೇನಹಳ್ಳಿ ಬಳಿಯ ಸತ್ಯಸಾಯಿ ಆಸ್ಪತ್ರೆಯ ಕಟ್ಟಡ ನಿರ್ಮಾಣದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸಹ ಕಾರ್ಮಿಕರೊಂದಿಗೆ ಕೈಫ್ ಕ್ವಾರಿ ಹೊಂಡದಲ್ಲಿ ಈಜಲು ತೆರಳಿದ್ದ. ಈಜು ಬಾರದ ಕೈಫ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡದಲ್ಲಿದ್ದ ಆಸ್ತಿಯ ಕಲಹ ಕಾರಣವಾಯ್ತೇ?
ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದ್ದು, ಹೊಂಡ ಬಹಳ ಆಳ ಇರುವ ಕಾರಣ ಇನ್ನೂ ಮೃತದೇಹ ಪತ್ತೆಯಾಗಿಲ್ಲ. ನಂದಿಗಿರಿಧಾಮ ಪೊಲೀಸ್ ಠಾಣಾ (Nandhigiridhama Police Station) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.