ಪಟ್ನಾ: ಮೆಗ್ನೀಸಿಯಮ್ ಕಾರ್ಬೋನೇಟ್ ಅಂಶ ಹೊಂದಿರುವ 12 ಬಗೆಯ ಪಾನ್ ಮಸಾಲ ಬ್ರಾಂಡ್‍ಗಳನ್ನು ಬಿಹಾರದ ಸರ್ಕಾರ ಬ್ಯಾನ್ ಮಾಡಿದೆ.
ಮೆಗ್ನೀಸಿಯಮ್ ಕಾರ್ಬೋನೇಟ್ ಹೊಂದಿರುವ ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಸಾಗಣಿಕೆ ಅಥವಾ ಮಾರಾಟವನ್ನು ಬಿಹಾರದಲ್ಲಿ ನಿಷೇಧಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Advertisement
Advertisement
ಗುಟ್ಕಾ ಪಾನ್ ಮಸಾಲದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ರಾಜ್ಯದ ಆಹಾರ ಮತ್ತು ಸುರಕ್ಷತಾ ಇಲಾಖೆ ಈ ಆದೇಶ ಹೊರಡಿಸಿದೆ. ಈ ಹಿಂದೆ ಆಹಾರ ಮತ್ತು ಸುರಕ್ಷತಾ ವಿಭಾಗವು ಪರೀಕ್ಷಿಸಿದಾಗ ಕೆಲ ಪಾನ್ ಮಸಾಲ ಬ್ರಾಂಡ್‍ಗಳಲ್ಲಿ ಮೆಗ್ನೀಸಿಯಮ್ ಕಾರ್ಬೋನೇಟ್ ಇರುವ ಅಂಶ ಪತ್ತೆಯಾಗಿತ್ತು. ಈ ರಾಸಾಯನಿಕದ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗಬಹುದು ಎಂದು ವರದಿ ನೀಡಿತ್ತು.
Advertisement
ಆಹಾರ ಮತ್ತು ಸುರಕ್ಷತಾ ಇಲಾಖೆಯಿಂದ ಪರೀಕ್ಷಿಸಲ್ಪಟ್ಟ, ರಾಜ್ನಿಗಂಧ ಪಾನ್ ಮಸಾಲಾ, ರಾಜ್ ನಿವಾಸ್ ಪಾನ್ ಮಸಾಲ, ಸುಪ್ರೀಂ ಪಾನ್ ಪರಾಗ್ ಪಾನ್ ಮಸಾಲ, ಪಾನ್ ಪರಾಗ್ ಪಾನ್ ಮಸಾಲ, ಬಹಾರ್ ಪಾನ್ ಮಸಾಲ, ಬಾಹುಬಲಿ ಪಾನ್ ಮಸಾಲ, ರಾಜಶ್ರೀ ಪಾನ್ ಮಸಾಲ, ರೌನಕ್ ಪಾನ್ ಮಸಾಲ, ಸಿಗ್ನೇಚರ್ ಪಾನ್ ಮಸಾಲಾ, ಕಮಲಾ ಲೈಕ್ಸ್ ಪಾನ್ ಮಸಾಲಾ, ಮಧು ಪಾನ್ ಮಸಾಲ ಬ್ರಾಂಡ್‍ಗಳಲ್ಲಿ ಮೆಗ್ನೀಸಿಯಮ್ ಕಾರ್ಬೋನೇಟ್ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಇವುಗಳ ಮಾರಾಟವನ್ನು ನಿಷೇಧಿಸಿದೆ.