ಪಾಟ್ನಾ: ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಬೆಂಬಲ ಸೂಚಿಸುವ ಮೂಲಕ ವಾಟ್ಸಾಪ್‍ನಲ್ಲಿ ವೀಡಿಯೋ ಶೇರ್ ಮಾಡಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬಿಹಾರದ ಸೀತಾಮರ್ಹಿಯಲ್ಲಿ ನಡೆದಿದೆ.
ಜುಲೈ 15ರ ಸಂಜೆ ಪಾನ್ ಶಾಪ್‍ನಲ್ಲಿ ಗ್ಯಾಂಗ್‍ವೊಂದು, ಅಂಕಿತ್ ಝಾ ಜೊತೆಗೆ ಜಗಳವಾಡಿದ್ದು, ಈ ವೇಳೆ ಚಾಕು ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಅಂಕಿತ್ ಝಾ ದರ್ಭಾಂಗಾದ ಸ್ಥಳೀಯ ನರ್ಸಿಂಗ್ ಹೋಮ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಆಸ್ಕರ್ ರೇಸ್ ನಲ್ಲಿ ‘ಆರ್.ಆರ್.ಆರ್’ ಹೆಸರು, ‘ಕೆಜಿಎಫ್ 2’ ಯಾಕಿಲ್ಲ ಎಂದ ಅಭಿಮಾನಿಗಳು
Advertisement
Advertisement
Advertisement
ನೂಪುರ್ ಶರ್ಮಾ ಅವರ ವೀಡಿಯೊವನ್ನು ವಾಟ್ಸಾಪ್ ಸ್ಟೇಟಸ್ ಆಗಿ ಅಂಕಿತ್ ಝಾ ಅಪ್‍ಲೋಡ್ ಮಾಡಿದ್ದರು. ಇದೇ ವೀಡಿಯೋವನ್ನು ವೀಕ್ಷಿಸುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ತನ್ನೊಂದಿಗೆ ಗಲಾಟೆ ಮಾಡಿದ್ದು, ನಂತರ ಯಾರೋ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಅಂಕಿತ್ ಝಾ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಈ ಘಟನೆ ನಂತರ ಮರುದಿನ ಯುವಕ ನಾಲ್ವರು ಮಂದಿ ಮೇಲೆ ದೂರು ದಾಖಲಿಸಿದ್ದು, ಅವರಲ್ಲಿ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ನಾನು ‘ಡೈಮಂಡ್ ಡಿಗ್’, ‘ಗೋಲ್ಡನ್ ಡಿಗ್ಗರ್’ ಅಲ್ಲ : ವಿರೋಧಿಗಳಿಗೆ ಸುಶ್ಮಿತಾ ಸೇನ್ ಟಾಂಗ್
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಸೀತಾಮರ್ಹಿಯ ಪೊಲೀಸ್ ಅಧೀಕ್ಷಕ ಹರ್ ಕಿಶೋರ್ ರೈ ಅವರು, ಜುಲೈ 15ರಂದು ಸಂಜೆ ನಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾನ್ ಶಾಪ್‍ವೊಂದರಲ್ಲಿ ಸಿಗರೇಟ್ ಸೇದುವ ವಿಚಾರವಾಗಿ ಮೂರ್ನಾಲ್ಕು ಜನರ ನಡುವೆ ಜಗಳ ನಡೆದಿದ್ದು, ಯುವಕನಿಗೆ ಚಾಕುವಿನಿಂದ ಇರಿದಿದ್ದಾರೆ. ಆದರೆ ಮಾಧ್ಯಮವರ ಬಳಿ ನೂಪುರ್ ಶರ್ಮಾ ಅವರಿಗೆ ಬೆಂಬಲಿಸಿದ್ದಕ್ಕೆ ಚಾಕು ಇರಿದಿದ್ದಾರೆ ಎಂದು ಹೇಳಿ ನೀಡಿದ್ದರಿಂದ ಆರೋಪಿಗಳ ವಿರುದ್ಧ ದೂರು ದಾಖಲಿಸಿ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.