ಪಾಟ್ನಾ: ಕೈದಿಯೊಬ್ಬ ತಪಾಸಣೆಯ ಸಮಯದಲ್ಲಿ ಮೊಬೈಲ್ (Mobile) ನುಂಗಿದ ಘಟನೆ ಬಿಹಾರದ (Bihar) ಗೋಪಾಲ್‍ಗಂಜ್ ಜಿಲ್ಲಾ ಕಾರಾಗೃಹದಲ್ಲಿ (Jail) ನಡೆದಿದೆ.
ಮೊಬೈಲ್ ನುಂಗಿದ ಕೈದಿಯನ್ನು ಖೈಶರ್ ಅಲಿ ಎಂದು ಗುರುತಿಸಲಾಗಿದೆ. ಈತನಿಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಖೈಶರ್ ಅಲಿ ಹೊಟ್ಟೆ ನೋವಿನಿಂದ ಬಳಲುತ್ತಿರುವುದನ್ನು ನೋಡಿದ ಜೈಲು ಅಧಿಕಾರಿ ತಕ್ಷಣ ಆತನನ್ನು ಗೋಪಾಲ್ಗಂಜ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
Advertisement
ಘಟನೆ ಬಗ್ಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯ ಮಾತನಾಡಿ, ಕೈದಿಯನ್ನು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಹೊಟ್ಟೆಯ ಎಕ್ಸ್‌ರೇಯನ್ನು ತೆಗೆದಿದ್ದು, ಈ ವೇಳೆ ಹೊಟ್ಟೆಯಲ್ಲಿ ಮೊಬೈಲ್ ಇರುವುದು ಕಾಣಿಸಿಕೊಂಡಿದೆ. ಅದಾದ ಬಳಿಕ ಹೊಟ್ಟೆಯಿಂದ ಮೊಬೈಲ್ ಅನ್ನು ಆಪರೇಷನ್ ಮಾಡಿ ತೆಗೆದುಹಾಕಲಾಗಿದೆ ಎಂದರು. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಹಾಡಹಗಲೇ ಶೂಟೌಟ್ – ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು
Advertisement
Advertisement
2020ರಂದು ಖೈಶರ್ ಅಲಿಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟೆನ್ಸ್ ಆ್ಯಕ್ಟ್‌ನಡಿಯಲ್ಲಿ ಗೋಪಾಲ್‍ಗಂಜ್ ಪೊಲೀಸರು ಬಂಧಿಸಿದ್ದಾರೆ. ಕಳೆದ 3 ವರ್ಷಗಳಿಂದ ಆತ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. ಇದನ್ನೂ ಓದಿ: ಹಿಂಡೆನ್‌ಬರ್ಗ್ ಎಫೆಕ್ಟ್ – 9.91 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿಗೆ ಇಳಿಯಿತು ಅದಾನಿ ಸಂಪತ್ತು
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k