ಪಾಟ್ನಾ: ಬಿಹಾರದ (Bihar) ಸಮಸ್ತಿಪುರ ಜಿಲ್ಲೆಯಲ್ಲಿ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ (Swatantrata Senani Express) ರೈಲಿನ ಮೇಲೆ ಗುರುವಾರ ರಾತ್ರಿ ಕಲ್ಲು ತೂರಾಟ ನಡೆದಿದೆ.
ಮುಜಾಫರ್‍ಪುರ-ಸಮಸ್ತಿಪುರ ಮಾರ್ಗದಲ್ಲಿ ಜೈನಗರದಿಂದ ದೆಹಲಿಗೆ ರೈಲು ಪ್ರಯಾಣಿಸುತ್ತಿದ್ದಾಗ ದಾಳಿ ನಡೆದಿದೆ. ಘಟನೆಯಲ್ಲಿ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮಸ್ತಿಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿತ- ಮಣ್ಣಿನಡಿ ಸಿಲುಕಿ ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ
ಕಿಡಿಗೇಡಿಗಳು ನಡೆಸಿದ ಕಲ್ಲು ತೂರಾಟದಿಂದ ರೈಲಿನ ಕೆಲವು ಕೋಚ್‍ಗಳ ಗಾಜುಗಳು ಪುಡಿಪುಡಿಯಾಗಿವೆ.
ಸಮಸ್ತಿಪುರ ರೈಲ್ವೆ ಪೊಲೀಸರು (Railway Police) ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಾಳಿಕೋರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕಲ್ಲುಗಳನ್ನು ಏಕೆ ಎಸೆಯಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಸಮಸ್ತಿಪುರ ರೈಲು ನಿಲ್ದಾಣದ ಹೊರ ಸಿಗ್ನಲ್‍ನಲ್ಲಿ ಈ ಘಟನೆ ಸಂಭವಿಸಿದೆ. ರೈಲು ಮುಜಾಫರ್‍ಪುರಕ್ಕೆ ಹೊರಡುವ ಮೊದಲು ಗುರುವಾರ ರಾತ್ರಿ 8:45ರ ಸುಮಾರಿಗೆ ನಿಲ್ದಾಣದಲ್ಲಿ ಸ್ವಲ್ಪ ಸಮಯ ನಿಂತಿತ್ತು. ಬಳಿಕ ಹೊರಗಿನ ಸಿಗ್ನಲ್ ತಲುಪಿದ ತಕ್ಷಣ ಕಲ್ಲು ತೂರಾಟ ಆರಂಭವಾಯಿತು. ದಾಳಿಯಿಂದಾಗಿ ರೈಲು 45 ನಿಮಿಷ ತಡವಾಯಿತು.
ಕಳೆದ ವಾರ ದೆಹಲಿ-ಜೈನಗರ ಮಾರ್ಗದ ಗಾಜಿಪುರದ ರಾಜ್‍ದೇಪುರ್ ಬಳಿ ರೈಲ್ವೇ ಹಳಿಯ ಮೇಲೆ ಮರದ ದಿಮ್ಮಿ ಇರಿಸಲಾಗಿತ್ತು. ಇದರಿಂದ ರೈಲಿನ ಇಂಜಿನ್‍ನ ಭಾಗಕ್ಕೆ ಹಾನಿಯಾಗಿ, ಮುನ್ನೆಚ್ಚರಿಕೆಯಾಗಿ ರೈಲನ್ನು ಸ್ಥಗಿತಗೊಳಿಸಲಾಗಿತ್ತು. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ವಿವಾದ – ಇಂದಿನಿಂದ ಟಿಟಿಡಿ ದೇವಾಲಯ ಪವಿತ್ರೋತ್ಸವ