ಪಾಟ್ನಾ: ಗೆಳೆಯನ ಜೊತೆ ಮಾತನಾಡಲು 1.5 ಲಕ್ಷದ ಐಫೋನ್ (iphone) ಕೇಳಿದ್ದು, ಪೋಷಕರು ನಿರಾಕರಿಸಿದ್ದಕ್ಕೆ ಪುತ್ರಿ ಕೈಕೊಯ್ದು ಹುಚ್ಚಾಟ ನಡೆಸಿದ ಘಟನೆ ಬಿಹಾರದ (Bihar) ಮುಂಗೇರ್‌ನಲ್ಲಿ ನಡೆದಿದೆ.
ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್ ಜೊತೆ ಮಾತಾಡಲು 1.5 ಲಕ್ಷದ ಐಫೋನ್ ಕೇಳಿದ್ದಳು. ಆದರೆ ಆಕೆಯ ಪೋಷಕರು ಮೊಬೈಲ್ ಕೊಡಿಸಲು ನಿರಾಕರಿಸಿದ್ದಾರೆ. ಇದರಿಂದ ಬ್ಲೇಡ್‌ನಿಂದ ತನ್ನ ಮಣಿಕಟ್ಟನ್ನು ಸೀಳಿಕೊಂಡಿದ್ದು, ಬಳಿಕ ದೇಹದ ಬೇರೆ ಭಾಗಗಳಿಗೂ ಗಾಯ ಮಾಡಿಕೊಂಡಿದ್ದಾಳೆ.ಇದನ್ನೂ ಓದಿ:ಚಿತ್ರದುರ್ಗ| ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ – 108 ಪ್ರಕರಣ ದಾಖಲು, 575 ಜೂಜುಕೋರರು ವಶಕ್ಕೆ
ಕಳೆದ ಮೂರು ತಿಂಗಳಿನಿಂದ ಯುವತಿ ತನ್ನ ತಾಯಿಯ ಬಳಿ ಐಫೋನ್‌ಗೆ ಬೇಡಿಕೆಯಿಡುತ್ತಿದ್ದಳು. ನಾನು ನನ್ನ ಬಾಯ್‌ಫ್ರೆಂಡ್ ಜೊತೆ ಮಾತನಾಡಬೇಕು ಎಂದು ಕೇಳಿದ್ದಾಳೆ. ಆದರೆ ತಾಯಿ ಐಫೋನ್ ಕೊಡಿಸಲು ನಮ್ಮ ಬಳಿ ಅಷ್ಟೊಂದು ಹಣ ಇಲ್ಲ ಎಂದು ತಿಳಿಸಿದ್ದಾರೆ. ತಾಯಿ ನಿರಾಕರಿಸಿದ್ದಕಾಗಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು, ಬ್ಲೇಡ್‌ನಿಂದ ತನ್ನ ಮಣಿಕಟ್ಟನ್ನು ಸೀಳಿಕೊಳ್ಳಲು ಪ್ರಾರಂಭಿಸಿದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಯುವತಿಯ ತಾಯಿ ಮಾತನಾಡಿ, ನಾವು ಬಡವರು. ಅವಳಿಗೆ ಇಷ್ಟೊಂದು ದುಬಾರಿ ಮೊಬೈಲ್ ಕೊಡಿಸಲು ಸಾಧ್ಯವಿಲ್ಲ. ನನ್ನ ಗಂಡ ಕೂಲಿ ಕೆಲಸದಿಂದ ಗಳಿಸುವ ಹಣದಿಂದ ನಮ್ಮ ಮನೆ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.
ಇನ್ನೂ ಈ ಕುರಿತು ಯುವತಿ ಮಾತನಾಡಿ, ನನ್ನ ಬಾಯ್‌ಫ್ರೆಂಡ್ ಇನ್ನೂ ಓದುತ್ತಿದ್ದಾನೆ. ನನಗೆ ಅವನ ಜೊತೆ ಮಾತನಾಡಲು ಕಷ್ಟವಾಗುತ್ತಿತ್ತು. ಹೀಗಾಗಿ ನಾನು ಐಫೋನ್ ಕೇಳುತ್ತಿದ್ದೆ. ಆದರೆ ತಾನು ಮಾಡಿದ್ದರಿಂದ ಪಶ್ಚಾತ್ತಾಪವಾಗಿದೆ. ಇನ್ನೂ ಮುಂದೆ ಈ ರೀತಿ ಮಾಡುವುದಿಲ್ಲ ಎಂದಿದ್ದಾಳೆ.
ಯಾವುದೇ ಗಂಭೀರ ಗಾಯವಾಗಿಲ್ಲ. ಆದರೆ ಕೈಗಳ ಮೇಲೆ ಬ್ಲೇಡ್‌ನಿಂದ ಚುಚ್ಚಿಕೊಳ್ಳಲಾಗಿದೆ. ಸದ್ಯ ಹುಣ್ಣುಗಳಾಗಿ ಬದಲಾಗದಂತೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.ಇದನ್ನೂ ಓದಿ:Hubballi | ರಂಜಾನ್ ಆಚರಣೆ ವೇಳೆ ಎಸ್‌ಡಿಪಿಐನಿಂದ ವಿವಾದಿತ ಪೋಸ್ಟರ್‌ಗಳ ಪ್ರದರ್ಶನ