ಬಿಹಾರದ (Bihar) ಬಿಹ್ತಾದಲ್ಲಿ (Bihta) ರಾಜ್ಯದ ಮೊದಲ ಡ್ರೈ ಪೋರ್ಟ್‌ನ್ನು (Dry Port) ಇತ್ತೀಚೆಗೆ ಉದ್ಘಾಟಿಸಲಾಯಿತು. ಇದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP) ಕಾರ್ಯನಿರ್ವಹಿಸುತ್ತಿದೆ. ಈ ಡ್ರೈ ಪೋರ್ಟ್‌ನಿಂದ ರೈಲುಗಳ ಮೂಲಕ ಕೋಲ್ಕತಾ, ಹಾಲ್ದಿಯಾ, ವಿಶಾಖಪಟ್ಟಣ, ನ್ಹಾವಾ ಶೇವಾ ಮತ್ತು ಮುಂದ್ರಾ ಬಂದರುಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.
ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ತೊಡಗಿರುವ ಯಾವುದೇ ರಾಜ್ಯಕ್ಕೆ ಬಂದರುಗಳ ಪಾತ್ರ ಭಾರೀ ನಿರ್ಣಾಯಕವಾಗಿರುತ್ತದೆ. ಇನ್ನೂ ಬಿಹಾರದ ಮೊದಲ ಡ್ರೈ ಪೋರ್ಟ್ ಮೂಲಕ ರಷ್ಯಾಕ್ಕೆ ಚರ್ಮದ ಉತ್ಪನ್ನಗಳನ್ನು ರಫ್ತು (Export) ಮಾಡಲಾಗುತ್ತದೆ. ಇದು ಜಾಗತಿಕ ವ್ಯಾಪಾರಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ. ಈ ಉಪಕ್ರಮವು ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ಬಿಹಾರದಲ್ಲಿ ಉತ್ಪಾದನೆಯಾಗುವ ಸರಕುಗಳ ರಫ್ತುಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ರಾಜ್ಯದ ಲಾಜಿಸ್ಟಿಕ್ಸ್ ಮತ್ತು ರಫ್ತು ಸಾಮರ್ಥ್ಯ ಸುಧಾರಿಸುವ ಪ್ರಮುಖ ಹೆಜ್ಜೆಯಾಗಿದೆ.
Advertisement
ಡ್ರೈ ಪೋರ್ಟ್ ಎಂದರೇನು?
Advertisement
ಡ್ರೈ ಪೋರ್ಟ್ ಇನ್‌ಲ್ಯಾಂಡ್ ಕಂಟೇನರ್ ಡಿಪೋ ಅಥವಾ ಐಸಿಡಿ ಎಂದು ಇದನ್ನು ಕರೆಯಲಾಗುತ್ತದೆ. ಇಲ್ಲಿಂದ ನೇರವಾಗಿ ರಸ್ತೆ ಹಾಗೂ ರೈಲಿನ ಮೂಲಕ ಬಂದರಿಗೆ ಸಂಪರ್ಕ ಕಲ್ಪಿಸಲಾಗಿರುತ್ತದೆ. ಇದು ಆಮದು ಮತ್ತು ರಫ್ತು ಮಾಡುವ ಸರಕುಗಳನ್ನು ತಾತ್ಕಾಲಿಕ ಸಂಗ್ರಹಣೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಆಮದು ಮತ್ತು ರಫ್ತು ಸರಕುಗಳ ನಿರ್ವಹಣೆ ಮಾಡುತ್ತದೆ.
Advertisement
Advertisement
ಡ್ರೈ ಪೋರ್ಟ್ ಭಾರತಕ್ಕೆ ಏಕೆ ಮುಖ್ಯ?
ಡ್ರೈ ಪೋರ್ಟ್‌ಗಳು ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಅಲ್ಲದೇ ಮುಂಬೈನ ಜವಾಹರಲಾಲ್ ನೆಹರು ಬಂದರು ಮತ್ತು ಚೆನ್ನೈ ಬಂದರಿನಂತಹ ಪ್ರಮುಖ ಬಂದರುಗಳಲ್ಲಿ ಸರಕು ಸಂಗ್ರಹ ದಟ್ಟಣೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಭಾರತದಲ್ಲಿ 330 ಡ್ರೈ ಪೋರ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ.
ಭಾರತದಲ್ಲಿ ಡ್ರೈ ಪೋರ್ಟ್‌ಗಳನ್ನು ಯಾರು ನಿರ್ವಹಿಸುತ್ತಾರೆ?
ಭಾರತದಲ್ಲಿ ಡ್ರೈ ಪೋರ್ಟ್‌ಗಳನ್ನು ಸರ್ಕಾರಿ ಏಜೆನ್ಸಿಗಳು (ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ – CONCOR ನಂತಹ) ಮತ್ತು ಖಾಸಗಿ ಕಂಪನಿಗಳು ನಿರ್ವಹಿಸುತ್ತಿವೆ.
ಬಿಹಾರದಲ್ಲಿ ಡ್ರೈ ಪೋರ್ಟ್‌ನ ಅವಶ್ಯಕತೆ ಏನು?
ಬಿಹಾರವು ಅದರ ವೈವಿಧ್ಯಮಯ ಉತ್ಪಾದನೆಯಿಂದ ಹೆಸರು ಮಾಡಿದೆ. ರಾಜ್ಯವು ಪ್ರಾಥಮಿಕವಾಗಿ ಕೃಷಿ ಆಧಾರಿತ ಉತ್ಪನ್ನಗಳು, ಬಟ್ಟೆ ಮತ್ತು ಚರ್ಮದ ವಸ್ತುಗಳನ್ನು ರಫ್ತು ಮಾಡುತ್ತದೆ. ಡ್ರೈ ಪೋರ್ಟ್ ಈ ಸರಕುಗಳನ್ನು ಸುಲಭವಾಗಿ ಸಾಗಿಸಲು ನೆರವಾಗುತ್ತದೆ.
ಬಿಹಾರ ಡ್ರೈ ಪೋರ್ಟ್‌ನ ಪ್ರಯೋಜನಗಳೇನು?
ರಾಜ್ಯವು ಪ್ರಮುಖ ಕೃಷಿ ಪ್ರಧಾನ ರಾಜ್ಯವಾಗಿದೆ. ಆಲೂಗಡ್ಡೆ, ಟೊಮೆಟೊ, ಬಾಳೆಹಣ್ಣುಗಳು, ಲಿಚಿಗಳಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಉತ್ಪಾದಿಸುತ್ತದೆ. ಮೆಕ್ಕೆಜೋಳ ಉತ್ಪಾದನೆಯಲ್ಲಿ ರಾಜ್ಯವು ಪ್ರಮುಖ ಸ್ಥಾನ ಪಡೆದಿದೆ. ಅಲ್ಲದೇ ಬಿಹಾರ ಸ್ಪಾಂಜ್ ಕಬ್ಬಿಣ, ಪ್ಯಾಕ್ ಮಾಡಿದ ಆಹಾರ, ತ್ಯಾಜ್ಯ ಕಾಗದ, ನ್ಯೂಸ್‌ಪ್ರಿಂಟ್, ಅಕ್ಕಿ ಮತ್ತು ಮಾಂಸವನ್ನು ರಫ್ತು ಮಾಡುತ್ತದೆ. ಇದರೊಂದಿಗೆ ಚರ್ಮ ಮತ್ತು ಗಾರ್ಮೆಂಟ್ ಕ್ಷೇತ್ರಗಳೂ ರಾಜ್ಯದಲ್ಲಿ ಬೆಳೆಯುತ್ತಿದೆ. ಈ ಎಲ್ಲಾ ಸರಕುಗಳನ್ನು ನಿರ್ವಹಣೆ, ಕಡಿಮೆ ಸಾರಿಗೆ ವೆಚ್ಚದಲ್ಲಿ ಸಾಗಾಟ ಮಾಡಲು ಅನುಕೂಲವಾಗುತ್ತದೆ. ಇದರೊಂದಿಗೆ ಬಿಹಾರದ ರಫ್ತು ಸಾಮರ್ಥ್ಯ ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಬಿಹಾರದ ಡ್ರೈ ಪೋರ್ಟ್ ಏಳು ಎಕರೆಗಳಷ್ಟು ಜಾಗಕ್ಕೆ ವ್ಯಾಪಿಸಿದೆ. ಇದನ್ನು ಪ್ರಿಸ್ಟಿನ್ ಮಗಧ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಮತ್ತು ರಾಜ್ಯ ಕೈಗಾರಿಕಾ ಇಲಾಖೆ ನಿರ್ವಹಿಸುತ್ತದೆ.
ರಫ್ತಿಗೆ ಸರ್ಕಾರದ ಬೆಂಬಲ
ಬಿಹಾರ ಸರ್ಕಾರವು ತನ್ನ ರಫ್ತು ಸಾಮರ್ಥ್ಯವನ್ನು ವಿಸ್ತರಿಸಲು ಮುಂದಾಗಿದೆ. ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಭೂಮಿಯನ್ನು ನೀಡಲು ಮುಂದಾಗುತ್ತಿದೆ. 2022-23ರ ಆರ್ಥಿಕ ವರ್ಷದಲ್ಲಿ ಬಿಹಾರ 20,000 ಕೋಟಿ ರೂ. ಮೌಲ್ಯದ ಸರಕುಗಳನ್ನು ರಫ್ತು ಮಾಡುವ ಮೂಲಕ ದಾಖಲೆ ನಿರ್ಮಿಸಿತ್ತು. ಇದೀಗ ಡ್ರೈ ಪೋರ್ಟ್‌ನ ಸ್ಥಾಪನೆಯು ಈ ಅಂಕಿಅಂಶಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಬಿಹಾರ ಡ್ರೈ ಪೋರ್ಟ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಹಣಕಾಸು ಸಚಿವಾಲಯದಿಂದ ಅನುಮೋದಿಸಲಾಗಿದೆ. ಇದು ಪಶ್ಚಿಮ ಬಂಗಾಳದ ಕೋಲ್ಕತ್ತಾ ಮತ್ತು ಹಲ್ದಿಯಾ, ಆಂಧ್ರಪ್ರದೇಶದ ವಿಶಾಖಪಟ್ಟಣ, ಮಹಾರಾಷ್ಟ್ರದ ನ್ಹವಾ ಶೇವಾ ಮತ್ತು ಗುಜರಾತ್‌ನ ಮುಂದ್ರಾ ಸೇರಿದಂತೆ ಪ್ರಮುಖ ಗೇಟ್‌ವೇ ಬಂದರುಗಳಿಗೆ ರೈಲು ಸಂಪರ್ಕವನ್ನು ಹೊಂದಿದೆ. ಈ ಸಂಪರ್ಕವು ಬಿಹಾರಕ್ಕೆ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಒಡಿಶಾಗಳಿಗೂ ಅನುಕೂಲವಾಗಲಿದೆ.