ಪಾಟ್ನಾ: ಪಾಟ್ನಾ-ಮೊಕಾಮಾ ನಡುವಿನ ಮೆಮು ರೈಲಿನಲ್ಲಿ ಅವಘಢ ಸಂಭವಿಸಿದೆ. ರೈಲು ನಿಲ್ಲಿಸಿದ್ದ ಜಾಗದಲ್ಲೇ ಬೆಂಕಿ ಹೊತ್ತು ಉರಿದಿದೆ.
ಪಾಟ್ನಾ-ಮೊಕಾಮಾ ರೈಲು ಮಂಗಳವಾರ ರಾತ್ರಿ 11 ಗಂಟೆಗೆ ಮೊಕಾಮಾ ಸ್ಟೇಷನ್ ತಲುಪಿತ್ತು. ಬುಧವಾರ ಮಧ್ಯರಾತ್ರಿ 1 ಗಂಟೆಗೆ 2 ಬೋಗಿಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಆ ಬೋಗಿಯ ಬೆಂಕಿ ಆರಿಸುವಾಗ ಇನ್ನೂ 2 ಬೋಗಿಗಳಿಗೆ ಬೆಂಕಿ ಹತ್ತಿಕೊಂಡಿತು ಎಂದು ಸಿಪಿಆರ್‍ಒ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
Advertisement
Advertisement
ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಆದ್ರೆ ರೈಲಿನಲ್ಲಿ ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.