ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ 2ನೇ ಹಂತದ ಮತದಾನ ಇಂದು ಮುಕ್ತಾಯವಾಗಿದ್ದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದೆ. ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿವೆ.
ರಾಜ್ಯದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ದಾರಿ ಮಾಡಿಕೊಟ್ಟಿದೆ. ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಬಣವು ಎನ್‌ಡಿಎಗಿಂತ ಹಿಂದುಳಿದಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಯಾವ ಸಮೀಕ್ಷೆ ಏನು ಹೇಳುತ್ತೆ?
ಪೀಪಲ್ಸ್ ಪಲ್ಸ್
ಎನ್‌ಡಿಎ 133-159 ಸ್ಥಾನ
ಮಹಾಘಟಬಂಧನ್ 75-101
ಪೀಪಲ್ಸ್ ಇನ್‌ಸೈಟ್
ಬಿಜೆಪಿ 68-72
ಜೆಡಿ(ಯು) 55-60
ಆರ್‌ಜೆಡಿ 65-72
ಕಾಂಗ್ರೆಸ್ 9-13
ಹೆಚ್‌ಎಎಂ 1-2
ಆರ್‌ಎಲ್‌ಎಂ 0-2
ಮ್ಯಾಟ್ರಿಜ್
ಎನ್‌ಡಿಎ 147-167
ಮಹಾಘಟಬಂಧನ್ 70-90
ದೈನಿಕ್ ಭಾಸ್ಕರ್
ಎನ್‌ಡಿಎ 145-160
ಮಹಾಘಟಬಂಧನ್ 73-91
ಜೆಎಸ್‌ಪಿ 0-0
ಇತರೆ 5-10
ಪೋಲ್‌ಸ್ಟ್ರಾಟ್
ಎನ್‌ಡಿಎ 133-148
ಮಹಾಘಟಬಂಧನ್ 87-102
ಜಾನ್ ಸೂರಾಜ್ 3-5
ಒಟ್ಟು 243 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆದಿದೆ. ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಬಹುಮತವಾಗಿ 122 ಸ್ಥಾನಗಳು ಬೇಕಾಗಿದೆ.

