LatestMain PostNational

ಬಿಜೆಪಿ ನಾಯಕಿ ಕೈಹಿಡಿದ ಲಾಲುಗೆ ಶಿಕ್ಷೆ ವಿಧಿಸಿದ್ದ ಜಡ್ಜ್

ಪಾಟ್ನಾ: ಮೇವು ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‍ಗೆ ಶಿಕ್ಷೆ ವಿಧಿಸಿದ್ದ ಸಿಬಿಐ ಮಾಜಿ ವಿಶೇಷ ನ್ಯಾಯಾಧೀಶರು ಬಿಜೆಪಿ ನಾಯಕಿಯನ್ನು ವಿವಾಹವಾಗಿದ್ದಾರೆ.

ಮಾಜಿ ವಿಶೇಷ ಸಿಬಿಐ ನ್ಯಾಯಾಧೀಶ ಶಿವ್ ಪಾಲ್ ಸಿಂಗ್ (59) ಅವರು ತಮಗಿಂತ 9 ವರ್ಷ ಕಿರಿಯ ವಕೀಲರಾದ ಬಿಜೆಪಿ ನಾಯಕಿ ನೂತನಾ ತಿವಾರಿ (50) ಅವರನ್ನು ಕೆಲವು ದಿನಗಳ ಹಿಂದೆ ದುಮ್ಕಾ ಜಿಲ್ಲೆಯ ಬಸುಕಿನಾಥ್ ದೇವಸ್ಥಾನದಲ್ಲಿ ಸಪ್ತಪದಿ ತುಳಿದಿದ್ದಾರೆ.

ಶಿವ್ ಪಾಲ್ ಸಿಂಗ್ ಅವರು ಕಳೆದ 3 ವರ್ಷಗಳಿಂದ ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ-1 ಆಗಿ ನೇಮಕಗೊಂಡಿದ್ದಾರೆ. ಈ ಮೊದಲು ವಿಶೇಷ ಸಿಬಿಐ ನ್ಯಾಯಾಧೀಶರಾಗಿದ್ದ ಅವರು ಮೇವು ಹಗರಣದ ಎರಡು ಪ್ರಕರಣಗಳಲ್ಲಿ ಬಿಹಾರದ ಮಾಜಿ ಸಿಎಂ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‍ಗೆ ಶಿಕ್ಷೆ ವಿಧಿಸಿದ್ದರು. ಇದನ್ನೂ ಓದಿ: ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು

ನ್ಯಾಯಾಧೀಶ ಶಿವ್ ಪಾಲ್ ಸಿಂಗ್ ಅವರಿಗೆ ಈಗಾಗಲೇ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. 2006ರಲ್ಲಿ ತಮ್ಮ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದರು. ಅದೇ ರೀತಿ ನೂತನ್ ಅವರು ಕೆಲವು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಅವರಿಗೂ ಮಗಳಿದ್ದಾಳೆ. ಇವರಿಬ್ಬರೂ ತಮ್ಮ ಮಕ್ಕಳು ಹಾಗೂ ಕುಟುಂಬಗಳ ಸಮ್ಮತಿಯೊಂದಿಗೆ ಮದುವೆಯಾಗಲು ನಿರ್ಧರಿಸಿದರು.

ಇದೀಗ ಅವರ ಮದುವೆ ಬಿಹಾರ ಹಾಗೂ ಜಾರ್ಖಂಡ್‍ನಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅನೇಕರು ಈ ಮದುವೆಯನ್ನು ಶ್ಲಾಘಿಸಿದ್ದು, ವಿಧವೆ ವಕೀಲೆಯೊಂದಿಗೆ ಅಂತಾರ್ಜಾತಿ ವಿವಾಹವಾಗಿದ್ದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶ ಮೂಲದ ಶಿವ್ ಪಾಲ್ ಸಿಂಗ್ ಅವರು 2023ರ ಮಾ. 21ಕ್ಕೆ ಜಾರ್ಖಂಡ್ ನ್ಯಾಯಧೀಶ ಹುದ್ದೆಯಿಂದ ನಿವೃತ್ತಿಯನ್ನು ಹೊಂದಲಿದ್ದಾರೆ. ಇದನ್ನೂ ಓದಿ: 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

Live Tv

Leave a Reply

Your email address will not be published.

Back to top button