ನವದೆಹಲಿ: ಚುನಾವಣಾ ಚಾಣಾಕ್ಯ ಪ್ರಶಾಂತ್ ಕಿಶೋರ್ (Prashanth Kishore) ಮ್ಯಾಜಿಕ್ ಢಮಾರ್ ಆಗಿದ್ದು ಮಹಾಘಟಬಂಧನ್‌ಗೆ (Mahagathbandhan) ಬಲವಾದ ಹೊಡೆತ ಕೊಟ್ಟಿದ್ದಾರೆ.
ಹೌದು. 2020 ರಲ್ಲಿ ಚಿರಾಗ್ ಪಸ್ವಾನ್ (Chirag Paswan) ಎನ್‌ಡಿಎಗೆ ಮತಗಳನ್ನು ಕಿತ್ತಿದ್ದರು. ಆದರೆ ಈ ಬಾರಿ ಪ್ರಶಾಂತ್ ಕಿಶೋರ್ ಅವರ ಸೂರಜ್ ಪಕ್ಷ ಮಹಾಘಟ್‌ಬಂಧನ್ ಮತಗಳನ್ನು ಕಸಿದಿದೆ
ಪ್ರಶಾಂತ್ ಕಿಶೋರ್ ಅವರು ಚುನಾವಣೆಗೆ ಸ್ಪರ್ಧೆ ಮಾಡದೇ ಇದ್ದರೂ 240 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು.
2020 ರಲ್ಲಿ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಪಕ್ಷ 135 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ 1 ಕ್ಷೇತ್ರಗಳನ್ನು ಮಾತ್ರ ಗೆದ್ದಿತ್ತು. ಆದರೆ ಶೇ.5.8 ಮತಗಳನ್ನು ಪಡೆಯುವ ಮೂಲಕ ಎನ್‌ಡಿಎಗೆ ಬಲವಾದ ಹೊಡೆತ ನೀಡಿತ್ತು. ಆದರಲ್ಲೂ ಜೆಡಿಯು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಎಲ್‌ಜೆಪಿ ಸ್ಪರ್ಧಿಸಿತ್ತು.
ಲೋಕಸಭಾ ಚುನಾವಣಾ ಸಮಯದಲ್ಲಿ ಎಲ್‌ಜೆಪಿ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅಷ್ಟೇ ಅಲ್ಲದೇ ಚಿರಾಗ್ ಪಸ್ವಾನ್ ಅವರಿಗೆ ಮೋದಿ ಸಂಪುಟದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಎಲ್‌ಜೆಪಿಗೆ 29 ಸ್ಥಾನ ನೀಡಲಾಗಿದೆ.

