– 121 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನ
ಪಾಟ್ನಾ: 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ (Bihar Election) ಗುರುವಾರ (ನ.6) 121 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತದಾನದಲ್ಲಿ ಶೇ.64.6ರಷ್ಟು ಮತ ಚಲಾವಣೆಯಾಗಿದೆ.
2020ರಲ್ಲಿ ನಡೆದ ಚುನಾವಣೆ ವೇಳೆ ಮೊದಲ ಹಂತದಲ್ಲಿ ಶೇ.52ರಷ್ಟು ಮತ ಚಲಾವಣೆ ಆಗಿತ್ತು. ಆದರೆ, ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ. 20 ವರ್ಷಗಳಲ್ಲೇ ಈ ಬಾರಿ ದಾಖಲೆಯ ಮತದಾನ ಆಗಿರೋದು ವಿಶೇಷ. ಮೊದಲ ಹಂತದಲ್ಲಿ 3.75 ಕೋಟಿ ಮತದಾರರು 1,314 ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದಾರೆ.ಇದನ್ನೂ ಓದಿ: ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಕಾರಿಗೆ ಚಪ್ಪಲಿ ಎಸೆದ ರೈತರು
ಸುಮಾರು ಎರಡು ದಶಕಗಳ ನಂತರ ಬಿಹಾರದ ಮುಂಗೇರ್ನ ನಕ್ಸಲ್ ಪೀಡಿತ ಭೀಮಬಂದ್ ಪ್ರದೇಶದಲ್ಲಿ ಮತದಾನ ನಡೆದಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಕಾರಣಗಳಿಂದಾಗಿ ವರ್ಷಗಳ ಕಾಲ ಮತದಾನ ಸ್ಥಗಿತಗೊಂಡಿತ್ತು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಲಖಿಸರಾಯ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ಅವರ ಬೆಂಗಾವಲು ಪಡೆಯ ಮೇಲೆ ಆರ್‌ಜೆಡಿ ಕಾರ್ಯಕರ್ತರು ಕಲ್ಲು, ಮಣ್ಣು, ಸಗಣಿ ಮತ್ತು ಬೂಟುಗಳಿಂದ ದಾಳಿ ಮಾಡಲಾಗಿದೆ. ಎಸ್‌ಪಿಗೆ ದುರ್ಬಲ, ಹೇಡಿ ಅಂತ ವಿಜಯ್ ಕುಮಾರ್ ಕಿಡಿಕಾರಿದ್ದಾರೆ. ಆರ್‌ಜೆಡಿಯ ತೇಜಸ್ವಿ ಯಾದವ್ ರಘೋಪುರದಿಂದ ನಿರಂತರ ಮೂರನೇ ಬಾರಿಗೆ ಗೆಲುವನ್ನು ಬಯಸುತ್ತಿದ್ದಾರೆ.
ಬಿಜೆಪಿಯ ಡಿಸಿಎಂ ಸಾಮ್ರಾಟ್ ಚೌಧರಿ ತಾರಾಪುರದಿಂದ 10 ವರ್ಷಗಳ ನಂತರ ನೇರವಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಬರಾಹಿಯಲ್ಲಿ ಬುರ್ಖಾ ಧರಿಸಿ ಬಂದ ಮಹಿಳೆಯರ ಬಗ್ಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟೀಕಿಸಿದ್ದಾರೆ. ಬುರ್ಖಾ ಧರಿಸಿ ಬರಲು ಇದು ಷರಿಯಾ ಕಾನೂನು ಇರುವ ಪಾಕಿಸ್ತಾನವಲ್ಲ ಎಂದಿದ್ದಾರೆ. ಈ ಮಧ್ಯೆ, 2ನೇ ಹಂತದ ಕ್ಷೇತ್ರಗಳ ಪ್ರಚಾರ ನಡೆಸಿದ ಮೋದಿ, ಆರ್‌ಜೆಡಿಯ 15 ವರ್ಷಗಳ ಆಡಳಿತಾವಧಿಯನ್ನು “ಜಂಗಲ್‌ರಾಜ್” ಎಂದು ಮತ್ತೆ ಕರೆದಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದರೂ ಪ್ರಧಾನಿ ಮೋದಿ ಎಲೆಕ್ಷನ್ ಗುಂಗಿನಲ್ಲಿ ಮುಳುಗಿದ್ದಾರೆ ಅಂತ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕುಟುಕಿದ್ದಾರೆ. ಮತದಾನ ಸಂದರ್ಭದಲ್ಲಿ ಕೆಲವೆಡೆ ಇವಿಎಂ ಸಮಸ್ಯೆಯಾಗಿತ್ತು.ಇದನ್ನೂ ಓದಿ: ನ.28ರಂದು ಉಡುಪಿಯಲ್ಲಿ ಭಗವದ್ಗೀತೆ ಶ್ಲೋಕ ಪಠಿಸಲಿದ್ದಾರೆ ಪ್ರಧಾನಿ ಮೋದಿ

