ಪಟ್ನಾ: ಮದ್ಯ ನಿಷೇಧಿಸಿದ್ದರೂ ಲೆಕ್ಕಿಸದೇ ಎಣ್ಣೆ ಪಾರ್ಟಿ ಮಾಡಿದ ವೈದ್ಯನನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರ್‌ನಲ್ಲಿ ನಡೆದಿದೆ. ಜಾರ್ಖಂಡ್‌ನ ಜಮ್ಷದ್‌ಪುರದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಭಿಷೇಕ್ ಮುಂಡು ಬಂಧಿತ ವೈದ್ಯ.
Advertisement
ನಿಷೇಧ ವಿಧಿಸಿದ್ದರೂ ನಿಯಮ ಉಲ್ಲಂಘಿಸಿ ಮದ್ಯ ಸೇವನೆ ಮಾಡಿರುವವರು ನಮ್ಮ ಕಸ್ಟಡಿಯಲ್ಲಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು. ಚರ್ಚ್ ಕಾಂಪೌಂಡ್‌ನಲ್ಲಿ ವೈದ್ಯ ಮದ್ಯ ಸೇವಿಸುತ್ತಿದ್ದಾರೆ ಎಂದು ಮಾಹಿತಿ ದೊರೆಯಿತು. ಸ್ಥಳಕ್ಕೆ ಧಾವಿಸಿ ಬಾಟಲಿ ಸಮೇತ ಆತನನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಂಕಲ್ ಅಂದಿದ್ದೇ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ
Advertisement
ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮದ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಜಮ್ಷದ್ ಇಎಸ್‌ಐ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯ ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಬಿಹಾರ್‌ಗೆ ಬಂದಿದ್ದ. ಈಗ ವೈದ್ಯ ಜೈಲು ಪಾಲಾಗಿದ್ದಾನೆ.
Advertisement
Advertisement
ಈತ ಮದ್ಯದ ಬಾಟಲಿಯನ್ನು ಎಲ್ಲಿ ಖರೀದಿಸಿದ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!
ಬಿಹಾರ್ ರಾಜ್ಯದಲ್ಲಿ ಮದ್ಯ ನಿಷೇಧ ಜಾರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಪೊಲೀಸರು ನ.26 ರಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದರು. ಮದ್ಯ ನಿಷೇಧದ ನಂತರ ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.