CrimeLatestMain PostNational

ಮಗಳನ್ನೇ ಅತ್ಯಾಚಾರ ಮಾಡುವ ಶಿಕ್ಷಕನಿಗೆ ಪತ್ನಿಯೂ ಸಾಥ್

ಪಾಟ್ನಾ: ಪಾಪಿ ತಂದೆಯೊಬ್ಬ ತನ್ನ ಮಗಳ ಮೇಲೆಯೇ ನಿರಂತರ ಅತ್ಯಾಚಾರ ಎಸಗಿದ್ದು, ಇದಕ್ಕೆ ತಾಯಿ ಕೂಡ ಸಾಥ್ ನೀಡಿರುವ ವಿಲಕ್ಷಣ ಘಟನೆಯೊಂದು ಬಿಹಾರದ ಸಮಸ್ತಿಪುರ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

18 ವರ್ಷದ ಯುವತಿಯು ಪ್ರತಿದಿನ ತನ್ನ ತಂದೆಯಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಳು. ಈ ಕೊಳಕು ಕೃತ್ಯಕ್ಕೆ ಅವರ ತಾಯಿಯೂ ಕೂಡಾ ಬೆಂಬಲ ನೀಡುತ್ತಿದ್ದಳು. ಮಗಳು ಈ ಕುರಿತು ದನಿ ಎತ್ತಿದಾಗಲೆಲ್ಲ ತಂದೆ-ತಾಯಿ ಇಬ್ಬರೂ ಆಕೆಯನ್ನು ಬೆದರಿಸಿ ಬಾಯಿ ಮುಚ್ಚಿಸುತ್ತಿದ್ದರು. ಕೊನೆಗೆ ಯುವತಿ ತನ್ನ ತಂದೆಯ ಈ ಕೃತ್ಯವನ್ನು ವೀಡಿಯೋ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದಾದ ಬಳಿಕ ಆರೋಪಿ ತಂದೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತ ಅನ್ನೋದಕ್ಕೆ ಛೋಟಾ ಪಾಕಿಸ್ತಾನ ಘೋಷಣೆಯೇ ಸಾಕ್ಷಿ: ಮುತಾಲಿಕ್

ಸಂತ್ರಸ್ತೆಯ ತಂದೆ ವೃತ್ತಿಯಲ್ಲಿ ಶಿಕ್ಷಕನಾಗಿದ್ದನು. 50 ವರ್ಷದ ಈತ ಪ್ರತಿದಿನ ತನ್ನ ಸ್ವಂತ ಮಗಳನ್ನೇ ರೇಪ್ ಮಾಡುತ್ತಿದ್ದನು. ಈ ಬಗ್ಗೆ ಮಗಳು ತನ್ನ ತಾಯಿಗೆ ದೂರು ನೀಡಿದಾಗ, ತಾಯಿಯು ಆಕೆಯೇ ಮೇಲೆಯೇ ಆರೋಪ ಮಾಡಲು ಪ್ರಾರಂಭಿಸಿದಳು. ಸಂತ್ರಸ್ತೆ ತನ್ನ ತಂದೆಯ ಕೊಳಕು ವರ್ತನೆಗಳಿಂದ ಬೇಸತ್ತು, ಅದನ್ನು ವೀಡಿಯೋ ಮಾಡಿ ರೋಸ್ಡಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಶ್ರೀವಲ್ಲಿ ಹಾಡಿಗೆ ಡ್ಯಾನ್ಸ್ ಮಾಡಿದ ಪ್ರಿನ್ಸಿಪಾಲ್ ಸಸ್ಪೆಂಡ್

ಈ ಹಿಂದೆ ಪೊಲೀಸರು ಯುವತಿಯ ದೂರು ದಾಖಲಿಸಿಕೊಳ್ಳದೆ ಠಾಣೆಯಿಂದ ಹೊರಹಾಕಿದ್ದರು ಎಂದು ಯುವತಿಯು ಆರೋಪಿಸಿದ್ದರು. ಆದರೆ ಈ ನೀಚ ಕೃತ್ಯ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಾಗ ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ದೂರಿನ ಆಧಾರದ ಮೇಲೆ ಆರೋಪಿ ತಂದೆಯನ್ನು ಬಂಧಿಸಲಾಗಿದೆ. ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಸರಿಯಾದ ಮಾಹಿತಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುವುದು ಎಂದು ಎಸ್‍ಡಿಪಿಒ ಸಹ್ರಿಯಾರ್ ಅಖ್ತರ್ ಹೇಳಿದ್ದಾರೆ.

Leave a Reply

Your email address will not be published.

Back to top button