ಭುವನೇಶ್ವರ: ಹಣಕಾಸಿನ ಸಮಸ್ಯೆಯಿಂದಾಗಿ ಪೋಷಕರು ತಮ್ಮ 4 ವರ್ಷದ ಹೆಣ್ಣು ಮಗುವನ್ನು 40,000 ರೂ.ಗಳಿಗೆ ಮಾರಾಟ (Daughter Selling) ಮಾಡಿರುವ ಆಘಾತಕಾರಿ ಘಟನೆ ಒಡಿಶಾದಲ್ಲಿ (Odisha) ನಡೆದಿದೆ.
ಘಟನೆ ತಿಳಿದ ಕೂಡಲೇ ಮಗುವನ್ನು ರಕ್ಷಣೆ ಮಾಡಿರುವ ಬಡಗಡ ಪೊಲೀಸರು (Badagada Police), ಪೋಷಕರು ಹಾಗೂ ಮಗು ಮಾರಾಟಕ್ಕೆ ಸಹಾಯ ಮಾಡಿದ ನಾಲ್ವರು ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯಿಂದ ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ – ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಆರೋಪಿ ದಂಪತಿ ಬಿಹಾರ ಮೂಲದವರಾಗಿದ್ದು, ಬಡಗಡದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕುಟುಂಬದಲ್ಲಿ ತುಂಬಾ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರು. ಹಾಗಾಗಿ ತಮ್ಮ ನಾಲ್ಕು ವರ್ಷದ ಮಗುವನ್ನು ಪಿಪಿಲಿಯಲ್ಲಿರುವ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದರು ಎಂದು ಬಡಗಡ ಪೊಲೀಸ್ ಠಾಣೆಯ ಪ್ರಭಾರಿ ತೃಪ್ತಿ ರಂಜನ್ ನಾಯಕ್ ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ನಂತರ ಬಡಗಡ ಪೊಲೀಸರು ಮಗುವನ್ನು ರಕ್ಷಿಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮಧ್ಯವರ್ತಿಗಳು ಮತ್ತು ಮಗುವಿನ ಪೋಷಕರು ಸೇರಿದಂತೆ ಒಟ್ಟು 6 ಜನರನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಧನುಷ್, ಐಶ್ವರ್ಯಾಗೆ ಡಿವೋರ್ಸ್ ಮಂಜೂರು ಮಾಡಿದ ಕೋರ್ಟ್- 18 ವರ್ಷಗಳ ದಾಂಪತ್ಯ ಅಂತ್ಯ
ಘಟನೆ ಕುರಿತು ಮಾತನಾಡಿದ ತೃಪ್ತಿ ರಂಜನ್ ನಾಯಕ್, ಸಾರ್ಥಕ್ ಮಹಾದಿಕ್ ಎಂಬಾತನಿಂದ ಬಿಹಾರದ ದಂಪತಿಗಳು ತಮ್ಮ ಮಗುವನ್ನು ಮಾರಾಟ ಮಾಡಿರುವ ಮಾಹಿತಿ ಗೊತ್ತಾಯಿತು. ತಕ್ಷಣ ಕಾರ್ಯಾಚರಣೆ ನಡೆಸಿ, ಮಗುವನ್ನು ರಕ್ಷಿಸಿದ್ದೇವೆ. ಪೋಷಕರು ಸೇರಿ 6 ಜನರನ್ನ ಬಂಧಿಸಿ ತನಿಖೆ ನಡೆಸುತ್ತಿದ್ದೇವೆ. ಪೋಷಕರು ಮಗುವನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂವಿಧಾನ ಪುಸ್ತಕ ಹಿಡಿದು ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣವಚನ ಸ್ವೀಕಾರ