ಪಾಟ್ನಾ: ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ 75.36 ಲಕ್ಷ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ. ಆದರೆ ಅವರ ಪುತ್ರ ನಿಶಾಂತ್, ತಂದೆಗಿಂತಲೂ ಐದು ಪಟ್ಟು ಹೆಚ್ಚು ಶ್ರೀಮಂತರಾಗಿದ್ದಾರೆ.
ಬಿಹಾರ್ ಸರ್ಕಾರದ ವೆಬ್‌ಸೈಟ್‌ನಲ್ಲಿ ಡಿ.31ರಂದು ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳನ್ನು ಅಪ್‌ಲೋಡ್ ಮಾಡಲಾಗಿದೆ. ನಿತಿಶ್ ಕುಮಾರ್ ಅವರು 29,385 ರೂ. ನಗದು ಹೊಂದಿದ್ದಾರೆ. 42,763 ರೂ. ಅನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ. ಅವರ ಪುತ್ರ 16,549 ರೂ. ನಗದು ಹೊಂದಿದ್ದು, 1.28 ಕೋಟಿ ರೂ. ಅನ್ನು ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿಸಿದ್ದಾರೆ. ಜೊತೆಗೆ ಹಲವು ಬ್ಯಾಂಕ್‌ಗಳಲ್ಲಿ ಹಣವನ್ನು ಠೇವಣಿ ಕೂಡ ಇಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾ ತಡೆಗಟ್ಟುವಲ್ಲಿ ಕೇಜ್ರಿವಾಲ್ ಸರ್ಕಾರ ವಿಫಲ: ಚರಣ್‌ಜಿತ್ ಸಿಂಗ್
Advertisement
Advertisement
ಸಿಎಂ ನಿತೀಶ್ ಕುಮಾರ್ ಅವರು, 16.51 ಲಕ್ಷ ರೂ. ಚರ ಹಾಗೂ 58.85 ಲಕ್ಷ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ. ಅವರ ಪುತ್ರ ನಿಶಾಂತ್ 1.63 ಕೋಟಿ ರೂ. ಚರ ಹಾಗೂ 1.98 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ.
Advertisement
ಬಿಹಾರ್ ಸಿಎಂ ನವದೆಹಲಿಯ ದ್ವಾರಕಾದಲ್ಲಿ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ ಒಂದು ಫ್ಲಾಟ್ ಹೊಂದಿದ್ದಾರೆ. ಅವರ ಪುತ್ರ ಕಲ್ಯಾಣ ಬಿಘಾ, ಹಕಿಕತ್‌ಪುರ, ಪಾಟ್ನಾದ ಕಂಕರ್‌ಬಾಗ್‌ನಲ್ಲಿ ಕೃಷಿ ಭೂಮಿ ನಿವಾಸಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: Whatsapp – ಒಂದೇ ತಿಂಗಳಲ್ಲಿ ಭಾರತೀಯರ 17 ಲಕ್ಷ ಖಾತೆಗಳು ಬ್ಯಾನ್
Advertisement
ನಿಶಾಂತ್ ತಮ್ಮ ಪೂರ್ವಜರ ಗ್ರಾಮ ಕಲ್ಯಾಣ ಬಿಘಾದಲ್ಲಿ ಕೃಷಿ ಭೂಮಿ ಹೊಂದಿದ್ದಾರೆ. ಇವರಿಗೆ ಗ್ರಾಮದಲ್ಲಿ ಕೃಷಿಯೇತರ ಭೂಮಿಯೂ ಇದೆ. 1.45 ಲಕ್ಷ ಮೌಲ್ಯದ 13 ಹಸುಗಳು ಮತ್ತು 9 ಕರುಗಳನ್ನು ಹೊಂದಿದ್ದಾರೆ.
ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ವರ್ಷದ ಕೊನೆಯ ತಿಂಗಳು ಸಂಪುಟದ ಎಲ್ಲಾ ಸಚಿವರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಿತ್ತು.