ಬಿಹಾರ: ಸಿಎಂ ನಿತೀಶ್ ಕುಮಾರ್ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ನಿತೀಶ್ ಅವರು ಕೋವಿಡ್-19 ಪರೀಕ್ಷೆಯನ್ನು ಮಾಡಿಸಿಕೊಂಡಿದ್ದು, ಇಂದು ರಿಪೋರ್ಟ್ ನಲ್ಲಿ ಅವರಿಗೆ ಪಾಸಿಟಿವ್ ಬಂದಿದೆ. ಈ ಹಿನ್ನೆಲೆ ವೈದ್ಯರ ಸಲಹೆಯ ಪ್ರಕಾರ ಪ್ರಸ್ತುತ ಅವರು ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ.
Advertisement
ಈ ಕುರಿತು ಮುಖ್ಯಮಂತ್ರಿಗಳ ಕಚೇರಿ(ಸಿಎಂಒ) ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದರು. ಟ್ವಟ್ಟರ್ ನಲ್ಲಿ, ಗೌರವಾನ್ವಿತ ಸಿಎಂ ನಿತೀಶ್ ಕುಮಾರ್ ಅವರ ಕೊರೊನಾ ಪರೀಕ್ಷೆಯು ಪಾಸಿಟಿವ್ ಎಂದು ಪತ್ತೆಯಾಗಿದೆ. ವೈದ್ಯರ ಸಲಹೆಯ ಪ್ರಕಾರ, ಅವರು ಮನೆಯಲ್ಲಿ ಪ್ರತ್ಯೇಕವಾಗಿರುತ್ತಾರೆ. ವೈರಸ್ ವಿರುದ್ಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅವರು ಎಲ್ಲರಿಗೂ ಮನವಿ ಮಾಡಿದ್ದಾರೆ ಎಂದು ಬಿಹಾರದ ಸಿಎಂಒ ಟ್ವೀಟ್ ಮಾಡಿದೆ. ಇದನ್ನೂ ಓದಿ: ಕನ್ನಡದ ಮೇಲಿನ ಕಾಳಜಿ ಎಲ್ಲ ಮಠಾಧೀಶರಲ್ಲೂ ಬರಬೇಕು: ಸೋಮಶೇಖರ್
Advertisement
माननीय मुख्यमंत्री श्री नीतीश कुमार कोरोना जाँच में पॉज़िटिव पाये गए हैं। चिकित्सकों की सलाह पर वह होम आइसोलेशन में हैं। उन्होंने सभी से कोविड अनुकूल सावधानियां बरतने की अपील की है।
— CMO Bihar (@officecmbihar) January 10, 2022
Advertisement
Advertisement
ಅದು ಅಲ್ಲದೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೂ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಮನೆಯಲ್ಲೇ ಐಸೊಲೇಟ್ ಆಗಿದ್ದಾರೆ. ಇಂದು ರಾಜ್ಯದಲ್ಲಿ ಕೋವಿಡ್ ಜೊತೆಗೆ ಓಮಿಕ್ರಾನ್ ಸಹ ಹೆಚ್ಚಾಗಿದ್ದು, ಇದು ಸರ್ಕಾರಕ್ಕೆ ತಲೆ ನೋವಾಗಿ ಪರಿಣಾಮಿಸಿದೆ. ಇದರಿಂದ ಜನರು ಸಹ ತಮ್ಮ ದಿನನಿತ್ಯದ ಜೀವನದಲ್ಲಿ ಏರುಪೇರು ಸಂಭವಿಸುವ ಸಾಧ್ಯತೆ ಇದೆ.