ಪಾಟ್ನಾ: ಎನ್‍ಡಿಎ ಒಕ್ಕೂಟದಿಂದ ಹೊರ ಬಂದು ಆರ್‌ಜೆಡಿ, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳೊಂದಿಗೆ ಸರ್ಕಾರ ರಚನೆ ಮಾಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಹೊಸ ಕ್ಯಾಬಿನೆಟ್ ರಚನೆ ಮಾಡಿದ್ದಾರೆ. 36 ಸಚಿವ ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಮೊದಲ ಹಂತದಲ್ಲಿ ಭರ್ತಿ ಮಾಡಲಾಗಿದೆ.
#WATCH | “The portfolios will be allocated shortly. I will hold a meeting of the entire cabinet today once again,” says Bihar CM Nitish Kumar after cabinet expansion. pic.twitter.com/6lMllUN8md
— ANI (@ANI) August 16, 2022
Advertisement
ಇಂದು ಆರ್‌ಜೆಡಿಯಿಂದ 11, ಜೆಡಿಯುನಿಂದ 16, ಕಾಂಗ್ರೆಸ್‍ನಿಂದ 2 ಹಾಗೂ ಹೆಚ್‍ಎಎಂನಿಂದ ಓರ್ವ ಶಾಸಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಾಟ್ನಾದ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಫಾಗು ಚೌಹಾನ್ ಪ್ರಮಾಣ ವಚನ ಬೋಧಿಸಿದರು. ಇದನ್ನೂ ಓದಿ: ಹಿಂದೂಗಳು ಅನಿವಾರ್ಯವಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ: ಸಂತೋಷ್ ಗುರೂಜಿ
Advertisement
#BiharCabinetExpansion | Congress MLA Murari Prasad Gautam, RJD MLA Mohammad Israil Mansuri and others take oath as ministers in the Bihar cabinet. pic.twitter.com/oTSVOADJR0
— ANI (@ANI) August 16, 2022
Advertisement
ಆರ್‌ಜೆಡಿಯಿಂದ ತೇಜ್ ಪ್ರತಾಪ್ ಯಾದವ್, ಅಲೋಕ್ ಮೆಹ್ತಾ, ಅನಿತಾ ದೇವಿ, ಸುರೇಂದ್ರ ಯಾದವ್, ಚಂದ್ರಶೇಖರ್, ಇಸ್ರೇಲ್ ಮನ್ಸೂರಿ, ಲಲಿತ್ ಯಾದವ್, ರಮಾನಂದ್ ಯಾದವ್, ಸುಧಾಕರ್ ಸಿಂಗ್, ಕುಮಾರ್ ಸರ್ಬ್ಜಿತ್ ರಾಮ್, ಶಮೀಮ್, ಸಮೀರ್ ಮಹಾಸೇತ್, ಜಿತೇಂದ್ರ ರೈ, ಮಾಸ್ಟರ್ ಕಾರ್ತಿಕ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೆಡಿಯುನಿಂದa ಹಳೆ ಸರ್ಕಾರದಲ್ಲಿದ್ದ 11 ಸಚಿವರನ್ನು ಮುಂದುವರಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕೆಂಬ ಆಸೆ ನನಗೂ ಇದೆ: ಸಿದ್ದು ಹಾಡಿ ಹೊಗಳಿದ ಶ್ರೀರಾಮುಲು
Advertisement
Bihar cabinet expansion: Nearly 30 Bihar MLAs, including Deputy CM Tejashwi’s brother Tej Pratap, sworn in
Read @ANI Story | https://t.co/DztOJUaPdL#Bihar #BiharPolitics #BiharCabinetExpansion #tejpratapyadav #swearinginceremony pic.twitter.com/39AZmjwVW8
— ANI Digital (@ani_digital) August 16, 2022
ಜೆಡಿಯು ಗೃಹ, ವಿಜಿಲೆನ್ಸ್, ಶಿಕ್ಷಣ, ಕಟ್ಟಡ ನಿರ್ಮಾಣ, ಅಲ್ಪಸಂಖ್ಯಾತರ ವ್ಯವಹಾರಗಳು, ಸಮಾಜ ಕಲ್ಯಾಣ ಮತ್ತು ಜಲಸಂಪನ್ಮೂಲ ಖಾತೆಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಆರ್‍ಜೆಡಿ ಹಣಕಾಸು, ವಾಣಿಜ್ಯ ತೆರಿಗೆ, ಆರೋಗ್ಯ, ರಸ್ತೆ ನಿರ್ಮಾಣ, ವಿಪತ್ತು ನಿರ್ವಹಣೆ, ಮತ್ತು ಪರಿಸರ ಮತ್ತು ಅರಣ್ಯ ಖಾತೆಗಳನ್ನು ಹೊಂದುವ ಸಾಧ್ಯತೆಗಳಿದೆ.
ಬಿಹಾರ ವಿಧಾನಸಭೆಯಲ್ಲಿ 242 ಸ್ಥಾನಗಳಲ್ಲಿ ಬಿಜೆಪಿ 77, ಜೆಡಿಯು 45, ಜಿತನ್ ರಾಮ್ ಮಾಂಝಿ ಅವರ HAM (S) 4, ಆರ್‌ಜೆಡಿ 79, ಕಾಂಗ್ರೆಸ್ 19, CPI (ML) 12, CPI 4, AIMIM ಮತ್ತು ಸ್ವತಂತ್ರ ತಲಾ ಒಂದು ಸ್ಥಾನವನ್ನು ಹೊಂದಿದೆ. ಜೆಡಿಯು-ಆರ್‌ಜೆಡಿ-ಎಚ್‌ಎಎಂ-ಕಾಂಗ್ರೆಸ್-ಸಿಪಿಐ(ಎಂಎಲ್)-ಸಿಪಿಐ ಮಹಾಮೈತ್ರಿಕೂಟ ಒಟ್ಟು 163 ಬಲ ಹೊಂದಿದೆ.