ಪಾಟ್ನಾ: ಬಿಹಾರದ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಎನ್‍ಡಿಎ ಮೈತ್ರಿಕೂಟ ಕೇವಲ ಒಂದರಲ್ಲಿ ಮಾತ್ರ ಗೆಲುವು ಕಂಡಿದೆ. ಚುನಾವಣೆ ಫಲಿತಾಂಶ ಸಿಎಂ ನಿತೀಶ್ ಕುಮಾರ್ ಅವರಿಗೆ ಆಘಾತವನ್ನು ನೀಡಿದೆ.
ಬಿಹಾರದಲ್ಲಿ ಈ ಉಪಚುನಾವಣೆಯನ್ನು ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿತ್ತು. ಎಲ್‍ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ನಿಧನದಿಂದ ತೆರವಾದ ಸಮಸ್ತಿಪುರ ಲೋಕಸಭಾ ಕ್ಷೇತ್ರದಲ್ಲಿ ರಾಮವಿಲಾಸ್ ಪಾಸ್ವಾನ ಅಳಿಯ ಮತ್ತು ಎಲ್‍ಜೆಪಿ ಸ್ಪರ್ಧಿ ಪ್ರಿನ್ಸ್ ರಾಜಾ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಅಶೋಕ್ ಕುಮಾರ್ ವಿರುದ್ಧ ಎಲ್‍ಜೆಪಿ ಪ್ರಿನ್ಸ್ ರಾಜಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರಿನ್ಸ್ ರಾಜಾ 1,03,371 ಮತಗಳನ್ನು ಪಡೆದು ಜಯ ಗಳಿಸಿದರೆ, ಅಶೋಕ್ ಕುಮಾರ್ 71,996 ಮತಗಳನ್ನು ಪಡೆದು ಸೋತಿದ್ದಾರೆ.
Advertisement
Advertisement
ಬಿಹಾರದ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದಿದ್ದು, ಫಲಿತಾಂಶ ಹೊರ ಬಿದ್ದಿದೆ. ನಾಥ್‍ನಗರ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ಲಕ್ಷ್ಮಿಕಾಂತ್ ಮಂಡಲ್ ಹಾಗೂ ಆರ್‌ಜೆಡಿ ಅಭ್ಯರ್ಥಿ ರಾಬಿಯಾ ಖಾತೂನ್ ಮಧ್ಯೆ ಭರ್ಜರಿ ಫೈಟ್ ನಡೆದಿತ್ತು. ಕೊನೆಗೆ ಲಕ್ಷ್ಮಿಕಾಂತ್ 5,131 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪರಾಭವಗೊಂಡ ರಾಬಿಯಾ ಖಾತೂನ್ 50,850 ಮತ ಗಳಿಸಿ ಸೋತಿದ್ದಾರೆ.
Advertisement
ಬೆಲಹರ್ ಕ್ಷೇತ್ರದಲ್ಲಿ ಆರ್‌ಜೆಡಿ ರಾಮ್‍ದೇವ್ ಯಾದವ್ 76,350 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪರಾಜಿತ ಜೆಡಿಯು ಅಭ್ಯರ್ಥಿ ಲಾಲಧಾರಿ ಯಾದವ್ 57,119 ಮತಗಳನ್ನು ಪಡೆದಿದ್ದಾರೆ.
Advertisement
ದರೌಂದಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಕರ್ಣಜಿತ್ ಸಿಂಗ್ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ. ಕಿಶನ್‍ಗಂಜ್ ಕ್ಷೇತ್ರದಿಂದ ಎಐಎಂಐಎಂ ಪಕ್ಷದ ಅಭ್ಯರ್ಥಿ ಖಮರುಲ್ಲಾ ಹೊಡಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಖಮರುಲ್ಲಾ ಹೊಡಾ 70,469 ಮತಗಳನ್ನು ಪಡೆದು ಜಯಗಳಿಸಿದರೆ ಬಿಜೆಪಿ ಅಭ್ಯರ್ಥಿ ಸ್ವೀಟಿ ಸಿಂಗ್ 60,265 ಮತ ಪಡೆದು ಸೋತಿದ್ದಾರೆ.
ಬಕ್ತಿಯಾರಪುರ ಕ್ಷೇತ್ರದಿಂದ ಆರ್‌ಜೆಡಿ ಜಫರ್ ಅಲಮ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜಫರ್ ಅಲಮ್ 71,441 ಮತಗಳನ್ನು ಪಡೆದರೆ, ಪರಾಜಿತ ಜೆಡಿಯುನ ಅರುಣ್ ಕುಮಾರ್ 55,936 ಮತ ಗಳಿಸಿದ್ದಾರೆ.