ಪಾಟ್ನಾ: ಸಶಸ್ತ್ರ ಪಡೆಗಳಿಗೆ ಕೇಂದ್ರವು ಹೊಸದಾಗಿ ಪರಿಚಯಿಸಿದ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ವಿರೋಧಿಸಿ ಬಿಹಾರ ವಿದ್ಯಾರ್ಥಿ ಸಂಘಟನೆಗಳು ಇಂದು ರಾಜ್ಯವ್ಯಾಪಿ ಬಂದ್‍ಗೆ ಕರೆ ನೀಡಿದ್ದಾರೆ.
ಆಲ್ ಇಂಡಿಯಾ ಅಸೋಸಿಯೇಷನ್ ನೇತೃತ್ವದ ಸಂಸ್ಥೆಗಳು ಈ ಯೋಜನೆಯನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಕೋರಿದೆ. ಈ ಬಂದ್ ಕರೆಗೆ ಲಾಲೂ ಪ್ರಸಾದ್ ಯಾದವ್ ಅವರ ಪಕ್ಷ ಆರ್‌ಜೆಡಿ ಬೆಂಬಲವನ್ನು ನೀಡಿದೆ ಎಂದು ಬಿಹಾರ ಘಟಕದ ಅಧ್ಯಕ್ಷ ಜಗದಾನಂದ್ ಸಿಂಗ್ ಘೋಷಿಸಿ, ಅಲ್ಪಾವಧಿಯ ನೇಮಕಾತಿ ಯೋಜನೆಯು ರಾಷ್ಟ್ರದ ಯುವಜನರ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: 2023ರ ಚುನಾವಣೆಗೆ ಬಿಜೆಪಿ ಸಜ್ಜು- ಕೋಟೆನಾಡಿಗೆ ಇಂದು ಜೆ.ಪಿ. ನಡ್ಡಾ ಭೇಟಿ
Advertisement
Advertisement
ಅಗ್ನಿಪಥ್ ನೇಮಕಾತಿ ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವವರನ್ನು ನಾವು ಬೆಂಬಲಿಸುತ್ತೇವೆ. ಸಶಸ್ತ್ರ ಪಡೆಗಳಲ್ಲಿ ಹೊಸ ಅಲ್ಪಾವಧಿ ನೇಮಕಾತಿ ಯೋಜನೆಯು ದೇಶದ ಯುವಕರ ಹಿತಾಸಕ್ತಿಯಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಸ್ಸಾಂ, ಮೇಘಾಲಯದಲ್ಲಿ ಪ್ರವಾಹ- 31 ಮಂದಿ ಸಾವು
Advertisement
ಇದೇ ವೇಳೆ ಪಕ್ಷದ ಕಾರ್ಯಕರ್ತರೊಂದಿಗೆ ಶನಿವಾರ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಿ ಯೋಜನೆ ಹಿಂಪಡೆಯಲು ಮನವಿ ಸಲ್ಲಿಸುವುದಾಗಿ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೇಳಿದರು.