ಪಾಟ್ನಾ: ಮುಂಬರುವ ದಸರಾ ಹಾಗೂ ದುರ್ಗಾ ಪೂಜೆಯ ಬಳಿಕ ಬಿಹಾರ ವಿಧಾನಸಭೆ ಚುನಾವಣೆಯ (Bihar Assembly Election) ದಿನಾಂಕ ನಿಗದಿಯಾಗಲಿದೆ ಎಂಧು ಚುನಾವಣಾ ಆಯೋಗದ (Election Commission) ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ನವೀಕರಿಸಿದ ಮತದಾರರ ಪಟ್ಟಿ ಪರಿಷ್ಕರಿಸಿದ ನಂತರ ಆಯೋಗವು ಅಕ್ಟೋಬರ್‌ನಲ್ಲಿ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಇನ್ಮುಂದೆ ಜಿಎಸ್‌ಟಿಯಲ್ಲಿ 2 ಸ್ಲ್ಯಾಬ್ – ಸೆ.22 ರಿಂದ ಜಾರಿ| ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ
ದಸರಾ ಉತ್ಸವ (Dussehra), ದುರ್ಗಾ ಪೂಜೆ ಮುಗಿದ ನಂತರ ಅಕ್ಟೋಬರ್ ಮೊದಲ ಅಥವಾ 2ನೇ ವಾರದಲ್ಲಿ ಚುನಾವಣಾ ದಿನಾಂಕ ಪ್ರಕಟಿಸುವ ಸಾಧ್ಯತೆಯಿದೆ. ಜೊತೆಗೆ ಛತ್ ಪೂಜೆಯ ನಂತರ ನವೆಂಬರ್‌ನಲ್ಲಿ 2 ಅಥವಾ 3 ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಸದ್ಯ ಮತ ಎಣಿಕೆಗೆ ನವೆಂಬರ್ 15, 20ರ ನಡುವೆ ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ. ಒಟ್ನಲ್ಲಿ ನವೆಂಬರ್ 22ರ ಒಳಗೆ ಸಂಪೂರ್ಣ ಚುಣಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾ ಯೋಗದ ಮೂಲಗಳು ತಿಳಿಸಿವೆ.
ಇನ್ನೂ ಬಿಜೆಪಿ, ಜೆಡಿ (ಯು) ಮತ್ತು ಎಲ್‌ಜೆಪಿ ಒಳಗೊಂಡಿರುವ ಎನ್‌ಡಿಎ ಒಕ್ಕೂಟವು ಬಿಹಾರದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವ ಗುರಿ ಹೊಂದಿದೆ. ಆದ್ರೆ ಅತ್ತ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳನ್ನೊಳಗೊಂಡ ಇಂಡಿಯಾ ಬಣವು ನಿತೀಶ್ ಕುಮಾರ್ ಅವರನ್ನ ಪದಚ್ಯುತಿಗೊಳಿಸಲು ಪಣ ತೊಟ್ಟು ನಿಂತಿದೆ. ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್‌ಗೆ ಇಡಿ ಸಮನ್ಸ್
243 ಸದಸ್ಯರ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ 131 ಸದಸ್ಯರನ್ನು ಹೊಂದಿದೆ. ಈ ಪೈಕಿ ಬಿಜೆಪಿ 80 ಶಾಸಕರನ್ನ ಒಳಗೊಂಡಿದೆ. ಜೆಡಿ(ಯು) 45, ಹೆಚ್‌ಎಎಂ(S)-4, 2 ಸ್ವತಂತ್ರ ಅಭ್ಯರ್ಥಿಗಳ ಬಲ ಹೊಂದಿದೆ. ವಿರೋಧ ಪಕ್ಷದ ಇಂಡಿಯಾ ಒಕ್ಕೂಡ 111 ಸದಸ್ಯರ ಬಲವನ್ನು ಹೊಂದಿದ್ದು, ಈ ಪೈಕಿ ಆರ್‌ಜೆಡಿ 77, ಕಾಂಗ್ರೆಸ್-19, ಸಿಪಿಐ (ಎಂಎಲ್) 11, ಸಿಪಿಐ (ಎಂ) 2 ಸಿಪಿಐ 2 ಸ್ಥಾನಗಳನ್ನ ಒಳಗೊಂಡಿದೆ. ಇದನ್ನೂ ಓದಿ: ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಮೂತಿಗೆ ಹಕ್ಕಿ ಡಿಕ್ಕಿ