ಬೆಂಗಳೂರು: ಇದೇ ನ.6, 11ರಂದು ಬಿಹಾರ ಚುನಾವಣೆ (Bihar Election) ನಡೆಯಲಿರುವ ಹಿನ್ನೆಲೆ ಬೆಂಗಳೂರಿನಲ್ಲಿರುವ (Bengaluru) ಬಿಹಾರಿಗಳನ್ನು ಇಂದು (ನ.2) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಭೇಟಿಯಾಗಲಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ಬಿಹಾರ ಮೂಲದ ನಿವಾಸಿಗಳನ್ನು ಡಿಕೆ ಶಿವಕುಮಾರ್ ಅವರು ಇಂದು ಸಂಜೆ 5 ಗಂಟೆಗೆ ಭೇಟಿ ಮಾಡಲಿದ್ದಾರೆ. ಈ ಮೂಲಕ ಇಂಡಿ ಒಕ್ಕೂಟದ ಪರವಾಗಿ ಡಿಕೆಶಿ ಮತಬೇಟೆ ನಡೆಸಲಿದ್ದಾರೆ.ಇದನ್ನೂ ಓದಿ: ಮಂಡ್ಯ| ನಾಲೆಯಲ್ಲಿ ನಾಲ್ವರು ಮಕ್ಕಳು ನಾಪತ್ತೆ – ಇಬ್ಬರು ಬಾಲಕಿಯರ ಶವ ಪತ್ತೆ
ಕಾರ್ಮಿಕ ಇಲಾಖೆಯ ಪ್ರಕಾರ, ಬೆಂಗಳೂರಿನಲ್ಲಿ 24,000 ನೋಂದಾಯಿತ ಬಿಹಾರದ ವಲಸೆ ಕಾರ್ಮಿಕರಿದ್ದಾರೆ. ಜೊತೆಗೆ ನಗರದಲ್ಲಿ ಒಟ್ಟು 8 ಲಕ್ಷಕ್ಕೂ ಹೆಚ್ಚು ಮಂದಿ ಬಿಹಾರಿಗಳು ವಾಸವಾಗಿದ್ದಾರೆ. ಈ ಪೈಕಿ ಶೇ.80ರಷ್ಟು ಮಂದಿ ನಿರ್ಮಾಣ, ಸಾರಿಗೆ, ಸಣ್ಣ ಕೈಗಾರಿಕೆ ಮತ್ತು ಆಹಾರ ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರು ಹಾಗೂ ಉಳಿದವರು ವಿವಿಧ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಬಹುತೇಕರು ಸರ್ಜಾಪುರ, ಎಲೆಕ್ಟ್ರಾನಿಕ್ಸ್ ಸಿಟಿ, ವೈಟ್‌ಫೀಲ್ಡ್, ಯಲಹಂಕ, ಯಶವಂತಪುರ ಮತ್ತು ಪೀಣ್ಯದಂತಹ ಪ್ರದೇಶಗಳಲ್ಲಿ ವಾಸವಿದ್ದಾರೆ ಎನ್ನಲಾಗಿದೆ.
ಇದೇ ನ.6 ಮತ್ತು 11ರಂದು ಎರಡು ಹಂತಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ. ನ.14ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಪೈಕಿ ನ.6ರಂದು 121 ಕ್ಷೇತ್ರಗಳಿಗೆ ಹಾಗೂ ನ.11ರಂದು 122 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.ಇದನ್ನೂ ಓದಿ: ತಾಳಿ ಕಟ್ಟುವಂತೆ ಒತ್ತಾಯಿಸುತ್ತಿದ್ದ ವಿಚ್ಛೇದಿತ ಮಹಿಳೆಯ ಕೊಲೆ – 6 ಬಾರಿ ಚಾಕುವಿನಿಂದ ಇರಿದು ಹತ್ಯೆಗೈದ ಪ್ರಿಯಕರ

