ಲಂಡನ್: 30 ವರ್ಷಗಳಲ್ಲೇ ಕಂಡಿರದ ಅತ್ಯಂತ ದೊಡ್ಡ ರೈಲು ಮುಷ್ಕರ ಮಂಗಳವಾರ ಬ್ರಿಟನ್‌ನಲ್ಲಿ ಪ್ರಾರಂಭವಾಗಿದೆ. ಬ್ರಿಟನ್ ಆರ್ಥಿಕತೆಯಲ್ಲಿ ವ್ಯಾಪಕವಾದ ಕೈಗಾರಿಕಾ ಕ್ರಮದಿಂದ ವೇತನ ಹಾಗೂ ಉದ್ಯೋಗಿಗಳ ವಿವಾದದಿಂದ 10 ಸಾವಿರ ಸಿಬ್ಬಂದಿ ಹೊರ ನಡೆದಿದ್ದಾರೆ. ಈ ಹಿನ್ನೆಲೆ ಬ್ರಿಟನ್‌ನಲ್ಲಿ ಬೃಹತ್ ಮುಷ್ಕರ ನಡೆಯುತ್ತಿದ್ದು, ಸ್ತಬ್ಧವಾದಂತೆ ತೋರುತ್ತಿದೆ.
ಮಂಗಳವಾರದ ಮುಷ್ಕರದಿಂದಾಗಿ 40 ಸಾವಿರಕ್ಕೂ ಅಧಿಕ ರೈಲು ಕಾರ್ಮಿಕರು ಸ್ಟೇಷನ್‌ಗಳಲ್ಲಿ ಸಾಲುಗಟ್ಟಿದ್ದಾರೆ. ಇದರಿಂದ ರೈಲ್ವೇ ಸಂಚಾರ ಸ್ಥಗಿತಗೊಂಡಿದೆ. ಪ್ರತ್ಯೇಕ ಮುಷ್ಕರದಿಂದ ಲಂಡನ್‌ನ ಅಂಡರ್‌ಗ್ರೌಂಡ್ ಮೆಟ್ರೋ ಸಂಚಾರ ಕೂಡಾ ಹೆಚ್ಚಾಗಿ ಮುಚ್ಚಲ್ಪಟ್ಟಿದೆ. ಇದನ್ನೂ ಓದಿ: ಹಾನಿಯಾದ ಸರ್ಕಾರಿ ಆಸ್ತಿಗೆ ಅಗ್ನಿಪಥ್ ಪ್ರತಿಭಟನಾಕಾರರಿಂದಲೇ ವಸೂಲಿ: ವಾರಣಾಸಿ ಆಡಳಿತ
Advertisement
Advertisement
ಕೋವಿಡ್‌ನಿಂದ ತತ್ತರಿಸಿ ಹೋಗಿರುವ ಸಂದರ್ಭ ಬ್ರಿಟಿಷ್ ಕುಟುಂಬಗಳಿಗೆ ಸಹಾಯದ ಅಗತ್ಯವಿದೆ. ಬದಲಿಗೆ ಕೈಗಾರಿಕಾ ಕ್ರಮ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಘಾಸಿಗೊಳಿಸಬಹುದು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.
Advertisement
ರೈಲು ಮುಷ್ಕರದಿಂದ ಅಲ್ಲಿನ ಶಿಕ್ಷಕರು, ವೈದ್ಯರು, ತ್ಯಾಜ್ಯ ವಿಲೇವಾರಿ ಕೆಲಸಗಾರರು ಹೀಗೆ ಮೊದಲಾದವರನ್ನು ಬಲವಂತವಾಗಿ ಕೈಗಾರಿಕಾ ಕ್ರಮದತ್ತ ದೂಡಿದಂತಾಗುತ್ತಿದ್ದು, ಅವರ ಅಸಮಾಧಾನಕ್ಕೂ ಕಾರಣವಾಗಬಹುದು ಎಂದು ಒಕ್ಕೂಟಗಳು ತಿಳಿಸಿವೆ.
Advertisement
ಕೋವಿಡ್ ಆರಂಭಕ್ಕೂ ಮೊದಲು ಬ್ರಿಟನ್ ಆರ್ಥಿಕತೆ ಚೇತರಿಕೆಯಲ್ಲಿತ್ತು. ಆದರೆ ಬಳಿಕ ಕಾರ್ಮಿಕರ ಕೊರತೆ, ಪೂರೈಕೆ ಸರಪಳಿಗೆ ಅಡ್ಡಿ, ಹಣದುಬ್ಬರಗಳಂತಹ ವ್ಯಾಪಾರ ಸಮಸ್ಯೆಗಳಿಂದ ಆರ್ಥಿಕತೆ ಕುಸಿತಕ್ಕೆ ಕಾರಣವಾಯಿತು. ಲಕ್ಷಾಂತರ ಬಡ ಕುಟುಂಬಗಳಿಗೆ ಹೆಚ್ಚುವರಿ ಬೆಂಬಲ ನೀಡುತ್ತದೆ ಎಂದು ಬ್ರಿಟನ್ ಸರ್ಕಾರ ಹೇಳುತ್ತದೆ. ಆದರೆ ಹಣದುಬ್ಬರದ ನಡುವೆಯೂ ವೇತನದ ಹೆಚ್ಚಳ ಆರ್ಥಿಕತೆಯನ್ನು ಇನ್ನಷ್ಟು ಹಾನಿಗೊಳಿಸಲು ಕಾರಣವಾಗಿದೆ. ಇದನ್ನೂ ಓದಿ: ಮುಂಬೈನಲ್ಲಿ ರಮೇಶ್ ಜಾರಕಿಹೊಳಿ – ಗುರುವಿನ ಋಣ ತೀರಿಸಲು ಮುಂದಾದ್ರಾ?
ಬೇಡಿಕೆಯೇನು?
ಕಾರ್ಮಿಕರಿಗೆ ಶೇ.3 ರಷ್ಟು ವೇತನವನ್ನು ಹೆಚ್ಚಳಗೊಳಿಸಬೇಕೆಂಬ ಬೇಡಿಕೆಯನ್ನು ಒಕ್ಕೂಟಗಳು ತಿರಸ್ಕರಿಸಿವೆ. ಇದರೊಂದಿಗೆ ಬೃಹತ್ ಉದ್ಯೋಗಿಗಳ ವಜಾ ಕೂಡಾ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ರೈಲು ಮುಷ್ಕರವನ್ನು ನಡೆಸಲಾಗುತ್ತಿದೆ. ಸದ್ಯ ಶೇ.20 ರಷ್ಟು ಸೇವೆಗಳು ಮಾತ್ರವೇ ಚಾಲನೆಯಲ್ಲಿರುವ ಕಾರಣ ಹಿಂದೆ ಗದ್ದಲದಿಂದ ಕೂಡಿದ್ದ ನಿಲ್ದಾಣಗಳು ಈಗ ಬಣಗುಟ್ಟುತ್ತಿವೆ. ಗುರುವಾರ ಹಾಗೂ ಶನಿವಾರವೂ ಮುಷ್ಕರ ನಡೆಸಲು ಯೋಜಿಸಲಾಗಿದೆ.