ರಾಜಸ್ಥಾನದಲ್ಲಿ ಅಮೆರಿಕ, ಭಾರತ ಸೇನೆಯಿಂದ ಜಂಟಿ ಸಮರಾಭ್ಯಾಸ

Public TV
1 Min Read
Biggest Joint Military Exercise Between India US Begins In Rajasthan

– ಉಭಯ ದೇಶಗಳ 1,200 ಸೈನಿಕರು ಭಾಗಿ

ಜೈಪುರ್: ಭಾರತ ಮತ್ತು ಅಮೆರಿಕ ಸೇನೆಯ ಜಂಟಿ ಮಿಲಿಟರಿ ಸಮರಾಭ್ಯಾಸ 2024 ರ 20ನೇ ಆವೃತ್ತಿ ರಾಜಸ್ಥಾನದ ಬಿಕಾನೇರ್‌ನ ಮಹಾಜನ್ ಫೀಲ್ಡ್‌ನಲ್ಲಿ ಪ್ರಾರಂಭವಾಗಿದೆ. ಈ ಸಮರಾಭ್ಯಾಸ ಸೆಪ್ಟೆಂಬರ್ 22 ರವರೆಗೆ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಮತ್ತು ಅಮೆರಿಕದ ಒಟ್ಟು 1,200 ಸೈನಿಕರು ಈ ಅಭ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆ 10:30ರ ಸುಮಾರಿಗೆ ಪಥಸಂಚಲನದೊಂದಿಗೆ ಸೇನಾ ಸಮರಾಭ್ಯಾಸ ಆರಂಭಗೊಂಡಿತು. ಈ ಆವೃತ್ತಿಯು ಸೈನ್ಯದ ಶಕ್ತಿಯನ್ನು ಸೂಚಿಸುತ್ತದೆ.

600 ಸಿಬ್ಬಂದಿಯನ್ನು ಒಳಗೊಂಡಿರುವ ಭಾರತೀಯ ಸೇನಾ ತುಕಡಿಯನ್ನು ರಜಪೂತ್ ರೆಜಿಮೆಂಟ್‍ನ ಬೆಟಾಲಿಯನ್ ಮತ್ತು ಇತರ ಶಸ್ತ್ರಾಸ್ತ್ರ ಪಡೆಗಳ ಸಿಬ್ಬಂದಿ ಭಾಗವಹಿಸಲಿದ್ದಾರೆ.

ವಿಶ್ವಸಂಸ್ಥೆಯ ಆದೇಶದ ಅಡಿಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಎರಡೂ ಕಡೆಯ ಜಂಟಿ ಮಿಲಿಟರಿ ಸಾಮಥ್ರ್ಯವನ್ನು ಹೆಚ್ಚಿಸುವುದು ಈ ಅಭ್ಯಾಸದ ಗುರಿಯಾಗಿದೆ. ಎರಡೂ ಕಡೆಯವರು ಜಂಟಿ ಕಾರ್ಯಾಚರಣೆಗಳನ್ನು ನಡೆಸಲು ತಂತ್ರಗಳನ್ನು ಪರಸ್ಪರ ಹಂಚಿಕೊಳ್ಳಲಿದ್ದಾರೆ. ಇದರಿಂದಾಗಿ ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ವೃದ್ಧಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article