ಬೆಂಗಳೂರು: ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್ ಬಾಸ್ ಸೀಜನ್ 4 ವಿನ್ನರ್ ಪ್ರಥಮ್‍ರನ್ನ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಮಂಗಳವಾರ ರಾತ್ರಿ ಗೆಳೆಯ ಲೋಕಲ್ ಲೋಕಿ ಜೊತೆ ಗಲಾಟೆ ಮಾಡಿಕೊಂಡು ತಡರಾತ್ರಿ ಫೇಸ್‍ಬುಕ್ ಲೈವ್‍ನಲ್ಲಿ ನಿದ್ದೆ ಮಾತ್ರೆ ಸೇವಿಸಿದ್ದೇನೆಂದು ಹೇಳಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಥಮ್‍ರನ್ನ ಮೊದಲಿಗೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಗರಬಾವಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಥಮ್ ಕೊಂಚ ಚೇತರಿಕೆ ಕಂಡಿದ್ರು. ಆದ್ರೆ ಬುಧವಾರ ಮಧ್ಯಾಹ್ನ ಫೋರ್ಟಿಸ್ ಐಸಿಯುನಲ್ಲಿ ಪ್ರಥಮ್ ಗಲಾಟೆ ಮಾಡಿದ್ದರು. ತಡರಾತ್ರಿ ಆಸ್ಪತ್ರೆ ಸಿಬ್ಬಂದಿ ಜೊತೆ ಜೋರಾಗಿ ಗಲಾಟೆ ಮಾಡಿದ್ದು, ಬೆತ್ತಲಾಗಿ ಆಸ್ಪತ್ರೆಯಲ್ಲಿ ಓಡಾಡಿ ಆತಂಕ ಮೂಡಿಸಿದ್ದರು.
Advertisement
Advertisement
ಈ ಹಿನ್ನೆಲೆಯಲ್ಲಿ ವೈದ್ಯರ ಸೂಚನೆ ಮೇರೆಗೆ ಪ್ರಥಮ್ ಪೋಷಕರು ನಿಮ್ಹಾನ್ಸ್ ಗೆ ದಾಖಲಿಸಲು ಯತ್ನಿಸಿದ್ದರು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪೋಷಕರು ಪ್ರಥಮ್‍ರನ್ನು ನಿಮ್ಹಾನ್ಸ್ ಗೆ ಕರೆದೊಯ್ದಿದ್ದರು. ನಿಮ್ಹಾನ್ಸ್ ನಲ್ಲಿ ತಲೆ ಸ್ಕಾನಿಂಗ್ ಬಳಿಕ ಮತ್ತೆ ಪ್ರಥಮ್ ಗಲಾಟೆ ಮಾಡಿದ್ದಾರೆ. ನಾನೇನು ಹುಚ್ಚನಲ್ಲ, ನಿಮ್ಹಾನ್ಸ್ ಗೆ ನನ್ನನ್ನು ಯಾಕೆ ಕರೆದುಕೊಂಡು ಬಂದ್ರಿ ಅಂತ ಪೋಷಕರ ಮುಂದೆಯೂ ಪ್ರಥಮ್ ಗಲಾಟೆ ಮಾಡಿದ್ದಾರೆ. ಬಳಿಕ ನಿಮ್ಹಾನ್ಸ್ ಬದಲಿಗೆ ಇದೀಗ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ್‍ರನ್ನ ದಾಖಲು ಮಾಡಲಾಗಿದೆ.
Advertisement
Advertisement
ತಡರಾತ್ರಿ ಸ್ನೇಹಿತ ಲೋಕಿ, ಪ್ರಥಮ್ ಆರೋಗ್ಯ ವಿಚಾರಣೆ ಮಾಡಿ ಬಂದಿದ್ದಾರೆ. ಬಳಿಕ ಮಾತನಾಡಿದ ಲೋಕಿ, ಸದ್ಯದಲ್ಲಿಯೇ ನಮ್ಮಿಬ್ಬರ ಮಧ್ಯೆ ಇರೋ ಸಮಸ್ಯೆಯನ್ನ ನಾವೇ ಬಗೆಹರಿಸಿಕೊಳ್ಳುತ್ತೇವೆ ಅಂತ ಹೇಳಿದ್ರು. ಮೂಲಗಳ ಪ್ರಕಾರ ಇಬ್ಬರ ಮಧ್ಯೆ ಸಂಧಾನ ನಡೆಯಲಿದ್ದು, ಪ್ರಥಮ್ ವಿರುದ್ಧ ನೀಡಿರುವ ಕೇಸನ್ನ ಲೋಕಿ ವಾಪಸ್ ಪಡೆಯಲಿದ್ದಾರೆ ಎನ್ನಲಾಗಿದೆ.