ಬೆಂಗಳೂರು: ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 7’ ರ ಸ್ಪರ್ಧಿ ದೀಪಿಕಾ ದಾಸ್ ಕಳಪೆ ಬೋರ್ಡ್ ಹಾಕಿಕೊಂಡು ಬಿಗ್ಬಾಸ್ ಮನೆಯಲ್ಲಿ ಜೈಲಿಗೆ ಹೋಗಿದ್ದಾರೆ.
ಹೌದು. ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ದೀಪಿಕಾ ದಾಸ್ ಕಳಪೆ ಬೋರ್ಡ್ ಧರಿಸಿಕೊಂಡು ಜೈಲಿಗೆ ಹೋಗಿದ್ದಾರೆ. ಯಾಕೆಂದರೆ ಈ ವಾರ ಮಾತ್ರ ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿರುತ್ತಾರೆ. ಹೀಗಾಗಿ ಬಿಗ್ ಮನೆಯಲ್ಲಿ ನಿಮಗೆ ಈಡೇರಬೇಕಾದ ಯಾವುದಾದರೂ ಆಸೆ ಇದ್ದರೆ ತಿಳಿಸಿ ಎಂದು ಬಿಗ್ಬಾಸ್ ಹೇಳಿದ್ದರು. ಸ್ಪರ್ಧಿಗಳು ಕೂಡ ತಮ್ಮ ಆಸೆಗಳನ್ನು ಬಿಗ್ಬಾಸ್ಗೆ ತಿಳಿಸಿದ್ದರು.
Advertisement
Advertisement
ದೀಪಿಕಾ ದಾಸ್ ಇಷ್ಟು ದಿನದ ಬಿಗ್ಬಾಸ್ ಜರ್ನಿಯಲ್ಲಿ ಒಮ್ಮೆಯೂ ಕ್ಯಾಪ್ಟನ್ ಆಗಿಲ್ಲ. ಜೊತೆಗೆ ಟಾಸ್ಕ್ ನಲ್ಲಿಯೂ ಕಳಪೆ ಪ್ರದರ್ಶನ ನೀಡಿಲ್ಲ. ಹೀಗಾಗಿ ಒಮ್ಮೆಯೂ ಕಳಪೆ ಬೋರ್ಡ್ ಧರಿಸಿ ಜೈಲಿಗೆ ಹೋಗಿಲ್ಲ. ಆದ್ದರಿಂದ ನಾನು ಒಂದು ಗಂಟೆಯಾದರೂ ಕಳಪೆ ಬೋರ್ಡ್ ಧರಿಸಿಕೊಂಡು ಜೈಲಿಗೆ ಹೋಗಬೇಕೆಂಬ ಆಸೆ ಇದೆ ಎಂದು ಬಿಗ್ಬಾಸ್ಗೆ ತಿಳಿಸಿದ್ದರು.
Advertisement
ಅದರಂತೆಯೇ ದೀಪಿಕಾ ದಾಸ್ ಕಳಪೆ ಬೋರ್ಡ್ ಧರಿಸಿಕೊಂಡು ಒಂದು ಗಂಟೆ ಜೈಲಿಗೆ ಹೋಗಿದ್ದರು. ಇನ್ನೂ ಕುರಿ ಪ್ರತಾಪ್ ತಾವೂ ಒಮ್ಮೆಯಾದರೂ ಲಕ್ಸುರಿ ಬಜೆಟ್ನಲ್ಲಿ ಶಾಪಿಂಗ್ ಮಾಡಬೇಕು ಎಂದಿದ್ದರು. ಅದರಂತೆಯೇ ಬಿಗ್ಬಾಸ್ 500 ಲಕ್ಸುರಿ ಪಾಯಿಂಟ್ ಕೊಟ್ಟು ಶಾಪಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದ್ದರು.
Advertisement
ವಾಸುಕಿ ಬಿಗ್ಬಾಸ್ ಮನೆಯಿಂದ ಹೊರಗೆ ಹೋದರೆ ಮತ್ತೆ ಇಲ್ಲಿ ಆಟವಾಡಿದ್ದ ಟಾಸ್ಕ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮತ್ತೆ ಒಂದು ಟಾಸ್ಕ್ ಮಾಡಬೇಕೆಂಬ ಆಸೆ ಇದೆ ಎಂದು ಕೇಳಿಕೊಂಡಿದ್ದರು. ಅದರಂತೆಯೇ ಮೊಟ್ಟೆ ಬ್ಯಾಲೆನ್ಸ್ ಮಾಡುವ ಟಾಸ್ಕ್ ನನ್ನು ಬಿಗ್ಬಾಸ್ ನೀಡಿದ್ದರು. ಆ ಗೇಮ್ ಅನ್ನು ಐದು ಸದಸ್ಯರು ಸೇರಿಕೊಂಡು ಆಟವಾಡಿದ್ದಾರೆ.