ತವರು ಜಿಲ್ಲೆಯಲ್ಲಿ ಬಿಗ್‍ಬಾಸ್ ವಿನ್ನರ್ ಶೈನ್‍ಗೆ ಅದ್ಧೂರಿ ಸ್ವಾಗತ

Public TV
1 Min Read
UDP SHINE

ಉಡುಪಿ: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ವಿನ್ನರ್ ಶೈನ್‍ಶೆಟ್ಟಿ ಗೆದ್ದ ನಂತರ ತವರು ಜಿಲ್ಲೆ ಉಡುಪಿಗೆ ಪ್ರಪ್ರಥಮ ಬಾರಿಗೆ ಆಗಮಿಸಿದ್ದು, ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.

ಶೈನ್ ಶೆಟ್ಟಿ ಬಿಗ್‍ಬಾಸ್ ಗೆದ್ದ ಬಳಿ ಮೊದಲ ಬಾರಿಗೆ ಉಡುಪಿಗೆ ಮಂಗಳವಾರ ಆಗಮಿಸಿದ್ದರು. ಹೀಗಾಗಿ ಶೈನ್ ಶೆಟ್ಟಿಯನ್ನು ನಗರದ ಜೋಡುಕಟ್ಟೆಯಿಂದ ಅದ್ಧೂರಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗಿತ್ತು. ಶೈನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ನೂರಾರು ಅಭಿಮಾನಿಗಳು ಮುಗಿಬಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಅವರ ಮೆರವಣಿಗೆ ಮಾಡಲಾಗಿದೆ. ಇದನ್ನೂ ಓದಿ: ಶೈನ್ ಜೇಬಿಗೆ 50 ಅಲ್ಲ 61 ಲಕ್ಷ ಜೊತೆಗೆ ನ್ಯೂ ಕಾರ್

SHINE

ಕಾಲೇಜು ವಿದ್ಯಾರ್ಥಿಗಳು, ಕಲಾತಂಡಗಳು ಚಂಡೆ, ಕೀಲುಕುದುರೆ ಮತ್ತಿತರ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮಂಗಳವಾರ ಸಂಜೆ ಕಾಲೇಜು ಬಿಡುವ ಸಮಯವಾದ್ದರಿಂದ ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ಜಮಾಯಿಸಿದ್ದರು. ತಮ್ಮ ಮೊಬೈಲ್‍ಗಳಲ್ಲಿ ಶೈನ್ ಶೆಟ್ಟಿಯ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

SHINE 1

ನಟ ಶೈನ್ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು, ಶೈನ್ ತಂದೆ ಕುಂದಾಪುರದ ಆರ್ಡಿಯವರು. ಉಡುಪಿಯಲ್ಲಿ ಶಿಕ್ಷಣವನ್ನು ಮುಗಿಸಿ ಬೆಳ್ಳಿತೆರೆಗೆ ಮನಸೋತು ಶೈನ್ ಬೆಂಗಳೂರು ಸೇರಿದ್ದರು. ಆದರೆ ಚಿತ್ರರಂಗದಲ್ಲಿ ಹಿನ್ನಡೆಯಾದರೂ ಸಣ್ಣ ಹೋಟೆಲ್ ಉದ್ಯಮ ಆರಂಭಿಸಿದರು. ಇದೀಗ ‘ಬಿಸ್‍ಬಾಸ್’ ವಿನ್ನರ್ ಆಗಿ ಶೈನ್ ಮತ್ತೆ ಮಿಂಚುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *