ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಇಡೀ ಚಿತ್ರರಂಗವೇ ಕಣ್ಣೀರು ಹಾಕುತ್ತಿದೆ. ನಟ ನಿಧನ ಹೊಂದಿ ಇಂದಿಗೆ 13 ದಿನ ಕಳೆದಿದೆ. ಇದೀಗ ನಟ ಶೈನ್ ಶೆಟ್ಟಿ ಅವರು ತನ್ನ ಜೀವನದಲ್ಲಿ ಅಪ್ಪು ಪ್ರಮುಖ ಪಾತ್ರ ವಹಿಸಿರುವುದನ್ನು ಮೆಲುಕು ಹಾಕುತ್ತಾ ಭಾವುಕರಾಗಿ ಬರೆದುಕೊಂಡಿದ್ದಾರೆ.
Advertisement
ಹೌದು. ತಮಗೆ ಹೇಗೆ ಪುನೀತ್ ರಾಜ್ ಕುಮಾರ್ ಅವರು ಪರಿಚಯವಾದರು, ಆ ಬಳಿಕ ಅವರು ನನಗೆ ಹೇಗೆ ಬೆಂಬಲ ನೀಡಿದರು ಎಂಬುದರ ಕುರಿತು ಶೈನ್ ಶೆಟ್ಟಿ ಇನ್ ಸ್ಟಾದಲ್ಲಿ ಭಾರವಾದ ಮನಸ್ಸಿನಿಂದಲೇ ಬರೆದುಕೊಂಡಿದ್ದಾರೆ.
Advertisement
ಶೈನ್ ಶೆಟ್ಟಿ ಬರೆದುಕೊಂಡಿದ್ದೇನು..?
ಬದುಕು ಒಂದು ಸಿನಿಮಾ ಅನ್ನುವುದು ಎಷ್ಟು ನಿಜ. ಆ ಸಿನಿಮಾದ ಚಿತ್ರಕಥೆಯಲ್ಲಿ 3 ಭಾಗವಿದೆಯೋ ಹಾಗೆಯೆ ಪುನೀತ್ ರಾಜ್ ಕುಮಾರ್ ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರ ವಹಿಸಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇವೆ: ರಾಧಿಕಾ ಪಂಡಿತ್
Advertisement
View this post on Instagram
ಮೊದಮೊದಲು ನನ್ನ ಈ ಕಲಾ ಪ್ರವಾಸ ಶುರುವಾದಾಗ, ಪುನೀತ್ ಸರ್ ಅವರನ್ನು ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಆಗಿ ಎದುರು ನೋಡುತ್ತಿದ್ದೆ, ಬೆಳ್ಳಿ ಪರದೆಯ ಮೇಲೆ ಅವರು ಮೂಡಿಸಿದ ಜಾದೂಗೆ ಬೆರಗಾಗಿದ್ದೆ. ಅವರ ಜೊತೆ ನಟಿಸಲು ಹಾಗೂ ಹಲವಾರು ಬಾರಿ ರಂಗಮಂಚಿಕೆ ಹಂಚಿಕೊಳ್ಳಲು ಅವಕಾಶ ದೊರೆತಾಗ ಒಂದು ಪುಟ್ಟ ಗೆಳೆತನ ಚಿಗುರೊಡೆಯಿತು. ಆಗ ಅವರು ನನ್ನ ಆಸೆ, ಪ್ರತಿಭೆಗಳನ್ನು ಹೊಗಳಿದಲ್ಲದ್ದೆ, ಅವರ ಅತ್ಯಮೂಲ್ಯವಾದ ಮಾರ್ಗದರ್ಶನ ನೀಡಿ ನನ್ನ ಗುರಿಯನ್ನು ತಲುಪಲು ಪ್ರೇರಿಸಿದರು. ಈ ಸಿನಿಮಾ ಫೀಲ್ಡ್ ನಲ್ಲಿ ಉಳಿಯೋದಕ್ಕೆ ಅಥವಾ ಬೆಳೆಯೋದಕ್ಕೆ ಅಪ್ಪು ಸರ್ ರವರ ಪ್ರೋತ್ಸಾಹ ಒಂದು ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಇದನ್ನೂ ಓದಿ: ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!
Advertisement
ಆ ಸ್ನೇಹ ಭ್ರಾತೃತ್ವದ ರೂಪ ಪಡೆಯಲು ಬಹಳ ಸಮಯ ಬೇಕಾಗಿರಲಿಲ್ಲ. ಪುನೀತ್ ಸರ್ ಅವರನ್ನು ಅಷ್ಟು ಕೊಂಡಾಡಲು ಅವರ ಸುತ್ತಮುತ್ತ ಇದ್ದ ಜನರನ್ನು ವೃತ್ತಿಯಲ್ಲಷ್ಟೇ ಅಲ್ಲ ವೈಯಕ್ತಿಕ ವಿಚಾರದಲ್ಲಿಯೂ ಹುರಿದುಂಬಿಸುತ್ತಿದ್ದರೆಂಬುದೇ ಸಾಕ್ಷಿ. ಗಲ್ಲಿ ಕಿಚನ್ ಶುರುವಾದಾಗ ತಮ್ಮ ಬೆಂಬಲದ ಜೊತೆಗೆ ಉತ್ತಮ ಉದ್ಯಮಿಯಾಗುವ ಹಲವಾರು ಆಲೋಚನೆಗಳನ್ನೂ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ಪುವಿನಂತೆ ಆದರ್ಶರಾದ ಅಭಿಮಾನಿ ದೇವರುಗಳು- 12 ದಿನಗಳ ಕಾರ್ಯ ನಿರ್ವಿಘ್ನ, ಎಲ್ಲವೂ ಶಾಂತ
ಬೆಳಿತಾ ಬೆಳಿತಾ ಆ ಮಿನುಗು ತಾರೆ, ಕಷ್ಟ ಪಡ್ತಾ ಆ ಸಲಹೆಗಾರ, ಕಾಲ ಕ್ರಮೇಣ ಪ್ರೀತಿಯ ಸಹೋದರನಾಗಿ ಬದಲಾಗಿ ನನ್ನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ. ನೀವು ಕಲಿಸಿದ ಪಾಠ, ಮೌಲ್ಯಗಳನ್ನು ಎಂದಿಗೂ ಜೀವಂತವಾಗಿ ಇರಿಸಿಕೊಳ್ಳುತ್ತಾ.. ಹೋಗ್ಬನ್ನಿ ಪುನೀತ್ ಸರ್ ಎಂದು ಬರೆದುಕೊಂಡು ಶೈನ್ ಭಾವುಕರಾಗಿದ್ದಾರೆ.
ಅಕ್ಟೋಬರ್ 29ರಂದು ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವರ್ಕೌಟ್ ಮಾಡಿದ ಸಂದರ್ಭದಲ್ಲಿ ಅಪ್ಪುಗೆ ಆಯಾಸ ಕಾಣಿಸಿಕೊಂಡಿತು. ಹಾಗೆಯೇ ಸ್ಟೀಮ್ ಬಾತ್ ಮಾಡಿಕೊಂಡು ಪತ್ನಿ ಜೊತೆ ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.
ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಿ ವಿಧಾನಗಳ ಮೂಲಕವಾಗಿ ಅಪ್ಪು ಅಂತ್ಯಕ್ರಿಯೆ ಮಾಡಲಾಯಿತ್ತು. ಅದೇ ದಿನ ರಾತ್ರಿಯಿಂದಲೇ ಅಪ್ಪು ಸಮಾಧಿ ದರ್ಶನ ಪಡೆಯಲು ಜನಸಾಗರವೇ ಹರಿದುಬರುತ್ತಿದೆ. ಸೋಮವಾರ 11 ದಿನದ ಕಾರ್ಯಕ್ರಮವನ್ನು ಕುಟುಂಬಸ್ಥರು ನೆರವೇರಿಸಿ 12ನೇ ದಿನವಾದ ನಿನ್ನೆ ಪುನೀತ್ ಮಹದಾಸೆ, ಮನದಾಸೆಯಂತೆ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು.