28 ಮಕ್ಕಳನ್ನು ದತ್ತು ಪಡೆದ ಆಧುನಿಕ ರೈತ ಶಶಿ: ವಿಡಿಯೋ ನೋಡಿ

Public TV
1 Min Read
bigg boss shashi

ಬೆಂಗಳೂರು: ಬಿಗ್ ಬಾಸ್ ಸೀಸನ್- 6 ವಿಜೇತ, ಆಧುನಿಕ ರೈತ 28 ಮಕ್ಕಳನ್ನು ದತ್ತು ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶಶಿಕುಮಾರ್ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದ ವಿವಿಎಸ್ ಶಾಲೆಯಲ್ಲಿ ಓದಿದ್ದರು. ಈಗ ಈ ಶಾಲೆಯ 28 ಮಕ್ಕಳನ್ನು ದತ್ತು ಪಡೆದಿದ್ದಾರೆ. ಅವರ ವಿದ್ಯಾಭ್ಯಾಸದ ಖರ್ಚುನ್ನು ನೋಡಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಅಲ್ಲದೆ ಈ ವಿಷಯವನ್ನು ಅವರು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವುದರ ಮೂಲಕ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

shashi

ವಿಡಿಯೋದಲ್ಲಿ ಏನಿದೆ?
ನಾನು ಈ ಶಾಲೆಯಲ್ಲಿ 28 ಮಕ್ಕಳನ್ನು ದತ್ತು ಪಡೆದುಕೊಳ್ಳುತ್ತಿದ್ದೇವೆ. ಇವರು ಇಲ್ಲಿ ಎಷ್ಟು ದಿನ ಎಷ್ಟು ವರ್ಷ ಇರುತ್ತಾರೋ ನಾನು ಅವರ ವಿದ್ಯಾಭ್ಯಾಸ ಮುಗಿಸೋವರೆಗೂ, ಅವರ ವಿದ್ಯಾಭ್ಯಾಸದ ಖರ್ಚು, ಯೂನಿಫಾರಂ, ಬುಕ್ಸ್, ಶೂ ಇಂತಹ ಖರ್ಚು ವೆಚ್ಚ ಏನೇ ಬಂದರೂ ನಾನೇ ನೋಡಿಕೊಳ್ಳುತ್ತೇನೆ ಎಂದು ಅವರಿಗೆ ಮಾತು ನೀಡಿದ್ದೇನೆ. ಈ ವಿವಿಎಸ್ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಈ ವಿಷಯ ತಿಳಿಸಿದ್ದೀನಿ.

ಈ ಮಕ್ಕಳನ್ನು ದತ್ತು ಪಡೆದುಕೊಂಡಿದಕ್ಕೆ ನನಗೆ ತುಂಬಾ ಖುಷಿ ಹಾಗೂ ಹೆಮ್ಮೆ ಆಗುತ್ತಿದೆ. ನಾನು ಇದೇ ಊರಿನವನಾಗಿದ್ದು, ಈ ಶಾಲೆ ಮೈದಾನದಲ್ಲಿ ಆಟವಾಡುತ್ತಾ ಬೆಳೆದು ಬಂದಿರುವದರಿಂದ ನನಗೆ ಆ ಒಂದು ಋಣ ಇದೆ. ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಾಗುತ್ತೆ ಎಂದುಕೊಂಡಿದ್ದೇನೆ. 28 ಸಂಖ್ಯೆ ಇನ್ನು ಜಾಸ್ತಿ ಆಗುತ್ತೆ ಎಂದು ನಾನು ಅಂದುಕೊಂಡಿದ್ದೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಶಶಿಕುಮಾರ್ ಈಗ ತಮ್ಮ ಎರಡನೇ ಸಿನಿಮಾವನ್ನು ಕೂಡ ಒಪ್ಪಿಕೊಂಡಿದ್ದಾರೆ. ಸಿನಿಮಾದ ಜೊತೆಗೆ ಶಶಿಕುಮಾರ್ ಕೃಷಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.

 

View this post on Instagram

 

Happy to adopt these 28 kids until they complete their schooling and listen to their dreams.

A post shared by Shashi Kumar (@shashi.official) on

Share This Article
Leave a Comment

Leave a Reply

Your email address will not be published. Required fields are marked *