ಕಿರುತೆರೆ ಇತಿಹಾಸದಲ್ಲೇ ಅತೀ ದೊಡ್ಡ ಶೋ ಬಿಗ್ ಬಾಸ್ ಕನ್ನಡ ಮತ್ತು ಹಿಂದಿಯಲ್ಲಿ (Bigg Boss Hindi) ಏಕಕಾಲದಲ್ಲಿ ಮುಕ್ತಾಯವಾಗಿದೆ. ಕನ್ನಡದಲ್ಲಿ ಕಾರ್ತಿಕ್ ಬಿಗ್ ಬಾಸ್ ಟ್ರೋಫಿಗೆ ಮುತ್ತಿಕ್ಕಿದ್ದರೆ, ಹಿಂದಿಯಲ್ಲಿ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ (Munawar Faruqui) ಟ್ರೋಫಿ ಎತ್ತಿ (Winner) ಹಿಡಿದಿದ್ದಾರೆ. ಬಿಗ್ ಬಾಸ್ ನಿಂದ ಬಂದ ನಂತರ ಮುನಾವರ್ ಫಾರೂಕಿ ರೋಡ್ ಶೋ ಮಾಡಿದ್ದು, ಲಕ್ಷಾಂತರ ಅಭಿಮಾನಿಗಳು ಅದಕ್ಕೆ ಸಾಕ್ಷಿಯಾಗಿದ್ದಾರೆ.
Advertisement
ಮುನಾವರ್ ಅವರನ್ನು ಸ್ವಾಗತಿಸೋದಕ್ಕಾಗಿಯೇ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ಸಿಡಿಸಲಾಗಿದೆ. ಗಂಟೆಗಟ್ಟಲ್ಲೇ ರಸ್ತೆಯಲ್ಲಿ ಬ್ಲಾಕ್ ಮಾಡಲಾಗಿದೆ. ಕಿಕ್ಕಿರಿದು ತುಂಬಿದ ರಸ್ತೆಯನ್ನು ಕ್ಲಿಯರ್ ಮಾಡೋದಕ್ಕಾಗಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಮುನಾವರ್ ಅಭಿಮಾನಿಗಳಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ.
Advertisement
Advertisement
‘ಬಿಗ್ ಬಾಸ್’ ವಿನ್ನರ್ ಮುನಾವರ್ ಫಾರೂಕಿಗೆ ಬಿಗ್ ಬಾಸ್ ಟೀಮ್ 50 ಲಕ್ಷ ಮೊತ್ತ, ಮತ್ತು ಕಾರನ್ನು ಬಹುಮಾನವಾಗಿ ನೀಡಲಾಗಿದೆ. ಈ ಹಿಂದೆ ಕಂಗನಾ ನಡೆಸಿಕೊಂಡು ಬಂದಿದ್ದ ಲಾಕಪ್ ರಿಯಾಲಿಟಿ ಶೋನ ಟ್ರೋಫಿ ಮುನಾವರ್ ಗೆದ್ದುಕೊಂಡಿದ್ದರು.
Advertisement
ಹಿಂದಿ ಬಿಗ್ ಬಾಸ್‌ನಲ್ಲಿ ಅಭಿಷೇಕ್ ಕುಮಾರ್ ಮೊದಲ ರನ್ನರ್ ಅಪ್, ನಟಿ ಅಂಕಿತಾ ಲೋಖಂಡೆ 2ನೇ ರನ್ನರ್ ಅಪ್, ಅರುಣ್ ಮಾಶೆಟ್ಟಿ ಅವರು 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಜನಪ್ರಿಯತೆ ಗಳಿಸಿರುವ ಮುನಾವರ್, ತಮ್ಮ ಹಾಸ್ಯದಿಂದಲೇ ಹಲವು ಸಮಸ್ಯೆಗಳನ್ನು ಎದುರಿಸಿದ್ದರು.