ಬಿಗ್ ಬಾಸ್ (Bigg Boss) ಸ್ಪರ್ಧಿಗಳು ಮನೆಯಿಂದ ಆಚೆ ಬಂದ ಮೇಲೂ ತಮ್ಮ ನಡುವಿನ ಬಾಂಧವ್ಯವನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಾಗ ಕಾರ್ತಿಕ್ ಅವರ ತಂಗಿಯ ಸೀಮಂತ ಮತ್ತು ಹೆರಿಗೆ ಕುರಿತಂತೆ ಮಾತುಕತೆಗಳು ನಡೆಯುತ್ತಲೇ ಇದ್ದವು. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಕಾರ್ತಿಕ್ (Karthik) ತಂಗಿಯ ಮಗುವಿಗೆ ತನಿಷಾ ಕುಪ್ಪಂಡ (Tanisha Kuppanda) ಸಣ್ಣದೊಂದು ಉಡುಗೊರೆ ನೀಡಿದ್ದರು. ಇದೀಗ ಮತ್ತೆ ಉಡುಗೊರೆ ಕೊಟ್ಟಿದ್ದಾರೆ.
ಕಾರ್ತಿಕ್ ಅವರ ತಂಗಿಯ ಮನೆಗೆ ಭೇಟಿ ನೀಡಿರುವ ತನಿಷಾ ಕುಪ್ಪಂಡ ಮಗುವಿಗೆ ಚಿನ್ನದ ಉಂಗುರುವನ್ನು ಉಡುಗೊರೆಯಾಗಿ (Gift) ಕೊಟ್ಟಿದ್ದಾರೆ. ಕೆಲ ಸಮಯ ಮಗುವಿನೊಂದಿಗೆ ಕಳೆದಿದ್ದಾರೆ. ಆ ಸ್ಮರಣೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ಅಲ್ಲದೇ, ಕಾರ್ತಿಕ್ ಅವರ ಸಹಾಯವನ್ನೂ ಗುಣಗಾನ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಾರ್ತಿಕ್ ಅವರಿಗೆ ತನಿಷಾ ಮತ್ತು ತನಿಷಾಗೆ ಕಾರ್ತಿಕ್ ಸಪೋರ್ಟ್ ಮಾಡಿಕೊಂಡು ಆಟವಾಡಿದ್ದಾರೆ. ಟಾಸ್ಕ್ ವಿಚಾರದಲ್ಲಿ ಜಗಳ ಕೂಡ ಮಾಡಿದ್ದಾರೆ. ಅದು ಏನೇ ಇದ್ದರೂ, ಅದನ್ನು ಆಟಕ್ಕಷ್ಟೇ ಸೀಮಿತ ಮಾಡಿಕೊಂಡು ಸ್ನೇಹವನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಿದ್ದಾರೆ.
ಕಾರ್ತಿಕ್ ಅವರ ತಂಗಿಯ ಬಗ್ಗೆ ಸಾಕಷ್ಟು ಜನರು ಮಾತನಾಡಿದ್ದರು. ಸ್ವತಃ ಕಾರ್ತಿಕ್ ಕೂಡ ಬಿಗ್ ಬಾಸ್ ಮನೆಯಲ್ಲಿ ಈ ಕುರಿತಂತೆ ಹೇಳಿಕೊಂಡಿದ್ದರು. ಕೊನೆಗೂ ಟ್ರೋಫಿ ಎತ್ತಿಕೊಂಡು ತಂಗಿಯ ಮಗುವನ್ನು ನೋಡಲು ಹೋಗಿದ್ದು ಮಾತ್ರ ಸಂಭ್ರಮಿಸಬೇಕಾದ ಸಂಗತಿ.